×
Ad

"ನಿಮ್ಮ ಪುತ್ರಿ ಸದಾ ನಿಮ್ಮೊಂದಿಗೆ ಇದ್ದಾಳೆ": ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಗೆ ಕೈಜೋಡಿಸಿದ ವಿನೇಶ್ ಫೋಗಟ್

Update: 2024-08-31 14:19 IST

Screengrab:X/@ANI

ಹೊಸದಿಲ್ಲಿ: ಭಾರತದ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಅವರು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಶನಿವಾರ ಶಂಭು ಗಡಿಯಲ್ಲಿ ಪ್ರತಿಭಟನಾನಿರತ ರೈತರ ಜತೆಗೆ ಪಾಲ್ಗೊಂಡರು. ನಿಮ್ಮ ಪುತ್ರಿ ಸದಾ ನಿಮ್ಮೊಂದಿಗೆ ಇದ್ದಾಳೆ ಎಂದು ಅವರು ಸ್ಪಷ್ಟಪಡಿಸಿದರು.

ಶಂಭುಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ 200ನೇ ದಿನವನ್ನು ತಲುಪಿದ್ದು, ದೊಡ್ಡ ಸಂಖ್ಯೆಯ ಪ್ರತಿಭಟನಾಕಾರರು ಶನಿವಾರ ಭಾಗವಹಿಸಿದ್ದರು. ಅವರಿಗೆ ಬೆಂಬಲಾರ್ಥವಾಗಿ ಫೋಗಟ್ ಪಾಲ್ಗೊಂಡರು.

ಫೆಬ್ರುವರಿ 13ರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು, ದೆಹಲಿಗೆ ಜಾಥಾ ತೆರಳಲು ತಡೆಯೊಡ್ಡಿದ ಹಿನ್ನೆಲೆಯಲ್ಲಿ ಗಡಿಯಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಎಲ್ಲ ಬೆಲೆಗಳಿಗೆ ಕನಿಷ್ಠ ಬೆಂಬಲಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ.

ಪ್ರತಿಭಟನೆಗೆ ಆಗಮಿಸಿದ ಸಂದರ್ಭದಲ್ಲಿ ಫೋಗಟ್ ಅವರನ್ನು ರೈತರು ಹಾರ ಹಾಕಿ ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News