×
Ad

ಮಿರಾ-ಭಾಯಂದರ್ ನಲ್ಲಿ ರಾಮ ಮಂದಿರ ಉದ್ಘಾಟನೆಗೆ ಮುನ್ನ ಹಿಂಸಾಚಾರ: 13 ಬಂಧನ

Update: 2024-01-23 21:24 IST

Photo: X \ @BellamSwathi

ಮುಂಬೈ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಒಂದು ದಿನ ಮುನ್ನ, ರವಿವಾರ ಮಹಾರಾಷ್ಟ್ರದ ಮಿರಾ- ಭಾಯಂದರ್ ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ.

ರವಿವಾರ ರಾತ್ರಿ ಸುಮಾರು 11 ಗಂಟೆಗೆ ಎರಡು ಸಮುದಾಯಗಳ ಸದಸ್ಯರ ನಡುವೆ ಘರ್ಷಣೆ ಆರಂಭವಾಯಿತು. ಜನರ ಒಂದು ಗುಂಪು ವಾಹನಗಳಲ್ಲಿ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ನಯಾ ನಗರ್ ಪ್ರದೇಶದಲ್ಲಿ ಹಾದು ಹೋದಾಗ ಗಲಭೆ ಸ್ಫೋಟಗೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆಗ ಆ ಗುಂಪಿನ ಮೇಲೆ ಸ್ಥಳೀಯ ಗುಂಪೊಂದು ಆಕ್ರಮಣ ನಡೆಸಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಕಬ್ಬಿಣದ ಸಲಾಕೆಗಳು, ದೊಣ್ಣೆಗಳು ಮತ್ತು ಕ್ರಿಕೆಟ್ ಬ್ಯಾಟ್ ಗಳಿಂದ ಸಜ್ಜಿತವಾಗಿದ್ದ ಗುಂಪು ಕೂಡ ಧಾರ್ಮಿಕ ಘೋಷಣೆಗಳನ್ನು ಕೂಗಿತು ಮತ್ತು ವಾಹನವೊಂದರಲ್ಲಿದ್ದ ವ್ಯಕ್ತಿಯೊಬ್ಬನ ಮೇಲೆ ಆಕ್ರಮಣ ನಡೆಸಿತು ಎಂಬುದಾಗಿ ಪೊಲೀಸ್ ದೂರಿನಲ್ಲಿ ದಾಖಲಾಗಿದೆ.

ಪಾತಕಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವರೂ ಆಗಿರುವ ರಾಜ್ಯದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.”ಈವರೆಗೆ 13 ಮಂದಿಯನ್ನು ಬಂಧಿಸಲಾಗಿದೆ ಮತ್ತು ಇತರರನ್ನು ಗುರುತಿಸಿ ಬಂಧಿಸಲು ಸಿಸಿಟಿವಿ ದೃಶ್ಯಾವಳಿಗಳ ವಿಶ್ಲೇಷಣೆ ನಡೆಸಲಾಗುತ್ತಿದೆ’’ ಎಂದು ಫಡ್ನವೀಸ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News