×
Ad

ಜನರ ಸಮಸ್ಯೆ ಪರಿಹರಿಸಲು ದಿನನಿತ್ಯ ಕ್ಷೇತ್ರಕ್ಕೆ ಭೇಟಿ ನೀಡಿ | ತಿಹಾರ್ ಜೈಲಿನಿಂದಲೇ ಕೇಜ್ರಿವಾಲ್ ಆಪ್ ಶಾಸಕರಿಗೆ ನಿರ್ದೇಶ

Update: 2024-04-04 20:42 IST

ಅರವಿಂದ ಕೇಜ್ರಿವಾಲ್ | Photo: PTI 

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಎಲ್ಲಾ ಶಾಸಕರು ಪ್ರತಿದಿನ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಬೇಕು ಹಾಗೂ ಜನರಿಗೆ ಯಾವುದೇ ರೀತಿಯ ತೊಂದರೆಯಾಗಂತೆ ನೋಡಿಕೊಳ್ಳಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಿಹಾರ್ ಕಾರಾಗೃಹದಿಂದ ಸಂದೇಶ ಕಳುಹಿಸಿದ್ದಾರೆ ಎಂದು ಅವರ ಪತ್ನಿ ಸುನಿತಾ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ.

ಸುನಿತಾ ಕೇಜ್ರಿವಾಲ್ ಗುರುವಾರ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದು, ಅರವಿಂದ ಕೇಜ್ರಿವಾಲ್ ಅವರು ತಾವು ಜೈಲಿನಲ್ಲಿದ್ದರೂ ತಮ್ಮ ಕುಟುಂಬವಾಗಿರುವ ದಿಲ್ಲಿಯ ಎರಡು ಕೋಟಿ ಜನರು ಯಾವುದೇ ಸಮಸ್ಯೆಗಳನ್ನು ಎದುರಿಸಬಾರದು ಎಂಬ ಸಂದೇಶ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

‘‘ಸರಕಾರಿ ಕೆಲಸ ಮಾತ್ರವಲ್ಲದೆ, ನಾವು ಜನರ ಸಮಸ್ಯೆಯನ್ನು ಕೂಡ ಪರಿಹರಿಸುವ ಅಗತ್ಯತೆ ಇದೆ’’ ಎಂದು ಅರವಿಂದ ಕೇಜ್ರಿವಾಲ್ ಅವರ ಸಂದೇಶವನ್ನು ಸುನಿತಾ ಕೇಜ್ರಿವಾಲ್ ಅವರು ಓದಿದ್ದಾರೆ.

ಈಗ ರದ್ದುಪಡಿಸಲಾಗಿರುವ ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಅರವಿಂದ ಕೇಜ್ರಿವಾಲ್ ಅವರು ಎಪ್ರಿಲ್ 15ರ ವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News