×
Ad

ಉಪ ರಾಷ್ಟ್ರಪತಿ ಚುನಾವಣೆ | ಸಂಸದರ ಬೆಂಬಲ ಕೋರಿದ ಬಿ.ಸುದರ್ಶನ್ ರೆಡ್ಡಿ: ಭಾರತದ ಆತ್ಮಕ್ಕಾಗಿನ ಮತ ಎಂದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ

Update: 2025-09-07 21:45 IST

Photo : PTI

ಹೊಸದಿಲ್ಲಿ: ಮುಂಬರುವ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಯೋಚಿಸಿ ಮತ ಚಲಾಯಿಸುವಂತೆ ರವಿವಾರ ಸಂಸದರಿಗೆ ಮನವಿ ಮಾಡಿರುವ ಇಂಡಿಯಾ ಮೈತ್ರಿಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್ಶನ್ ರೆಡ್ಡಿ, ಪಕ್ಷದ ಹಿತಾಸಕ್ತಿಯ ಎದುರು ರಾಷ್ಟ್ರೀಯ ಹಿತಾಸಕ್ತಿಯನ್ನು ಆದ್ಯತೆಯನ್ನಾಗಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾಗಿರುವ ಸುದರ್ಶನ್ ರೆಡ್ಡಿ ಅವರ ವಿಡಿಯೊದಲ್ಲಿ, “ಗೌರವಾನ್ವಿತ ಸದಸ್ಯರೆ, ಇನ್ನೆರಡು ಮೂರು ದಿನಗಳಲ್ಲಿ ಉಪ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಪ್ರತಿಯೊಬ್ಬರೂ ಯೋಚಿಸಿ, ಪಕ್ಷದ ಹಿತಾಸಕ್ತಿಗಳ ಎದುರು ರಾಷ್ಟ್ರೀಯ ಹಿತಾಸಕ್ತಿಯನ್ನು ಆದ್ಯತೆಯನ್ನಾಗಿಸಿಕೊಳ್ಳಿವ ಎಂದು ಮನವಿ ಮಾಡಿಕೊಳ್ಳುತ್ತೇನೆ” ಎಂದು ನೇರವಾಗಿ ಸಂಸದರನ್ನುದ್ದೇಶಿಸಿ ಮನವಿ ಮಾಡಿದ್ದಾರೆ.

“ನೀವು ಮಾಡುವ ನಿರ್ಧಾರವು ನನ್ನ ಅಥವಾ ನಿನ್ನ ಹಿತಾಸಕ್ತಿಯನ್ನು ಹೊಂದಿರುವುದಿಲ್ಲ, ಬದಲಿಗೆ ರಾಷ್ಟ್ರೀಯ ಹಿತಾಸಕ್ತಿಯನ್ನು ಹೊಂದಿರುತ್ತದೆ ಎಂಬುದರ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ” ಎಂದೂ ಅವರು ಹೇಳಿದ್ದಾರೆ. “ನಿಮ್ಮ ನಿರ್ಧಾರ ಏನೇ ಆಗಿದ್ದರೂ, ಅದನ್ನು ಸ್ವೀಕರಿಸಲು ನಾನು ಸಿದ್ಧನಾಗಿದ್ದೇನೆ” ಎಂದು ಅವರು ಘೋಷಿಸಿದ್ದಾರೆ.

ಸೆಪ್ಟೆಂಬರ್ 9ರಂದು ಉಪ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಕಣಕ್ಕಿಳಿದಿದ್ದು, ಅವರೆದುರು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News