×
Ad

ಫ್ಯಾಕ್ಟ್‌ ಚೆಕ್‌ | ಇರಾನ್‌ ಮೇಲೆ ಅಮೆರಿಕ ದಾಳಿಗೆ ಭಾರತದ ವಾಯುಪ್ರದೇಶವನ್ನು ಬಳಸಲಾಗಿತ್ತೇ?

Update: 2025-06-23 16:18 IST

PC : PIB@factcheck

ಹೊಸದಿಲ್ಲಿ: ಇರಾನ್‌ನ ಪರಮಾಣು ಸ್ಥಾವರದ ವಿರುದ್ಧ ಪ್ರಾರಂಭಿಸಲಾದ ಆಪರೇಷನ್ ಮಿಡ್‌ನೈಟ್ ಹ್ಯಾಮರ್ ಅನ್ನು ನಡೆಸಲು ಅಮೆರಿಕ ಸೇನೆಯು ಭಾರತೀಯ ವಾಯುಪ್ರದೇಶವನ್ನು ಬಳಸಿಕೊಂಡಿದೆ ಎಂಬ ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ಹೇಳಿಕೆಗಳನ್ನು ಪತ್ರಿಕಾ ಮಾಹಿತಿ ಬ್ಯೂರೋದ (PIB) ಸತ್ಯ ಪರಿಶೀಲನಾ ಘಟಕವು ತಳ್ಳಿಹಾಕಿದೆ.

ರವಿವಾರ X ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, PIB ಸತ್ಯ ಪರಿಶೀಲನಾ ಘಟಕವು ಈ ಹೇಳಿಕೆಯನ್ನು ಸುಳ್ಳು ಎಂದು ಹೇಳಿದ್ದು, ಆಪರೇಷನ್ ಮಿಡ್‌ನೈಟ್ ಹ್ಯಾಮರ್ ಕಾರ್ಯಾಚರಣೆಗೆ ಅಮೆರಿಕವು ಭಾರತೀಯ ವಾಯುಪ್ರದೇಶವನ್ನು ಬಳಸಲಿಲ್ಲ ಎಂದು ಸ್ಪಷ್ಟಪಡಿಸಿದೆ.

ಇರಾನ್‌ನ ಪರಮಾಣು ಮೂಲಸೌಕರ್ಯದ ಮೇಲೆ ಮಿಲಿಟರಿ ದಾಳಿ ನಡೆಸಲು ಅಮೆರಿಕ ಪಡೆಗಳು ಭಾರತೀಯ ವಾಯುಪ್ರದೇಶವನ್ನು ಬಳಸಿಕೊಂಡಿವೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ನಕಲಿ ಸುದ್ದಿಯನ್ನು ಹರಿಬಿಡಲಾಗಿತ್ತು.

"ಆಪರೇಷನ್ ಮಿಡ್‌ನೈಟ್ ಹ್ಯಾಮರ್ ಸಮಯದಲ್ಲಿ ಇರಾನ್ ವಿರುದ್ಧ ವಿಮಾನಗಳನ್ನು ಹಾರಿಸಲು ಅಮೆರಿಕವು ಭಾರತೀಯ ವಾಯುಪ್ರದೇಶವನ್ನು ಬಳಸಿಕೊಂಡಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳು ಹೇಳಿಕೊಂಡಿವೆ. ಇದು ಸುಳ್ಳು. ಆಪರೇಷನ್ ಮಿಡ್‌ನೈಟ್ ಹ್ಯಾಮರ್ ಸಮಯದಲ್ಲಿ ಅಮೆರಿಕವು ಭಾರತೀಯ ವಾಯುಪ್ರದೇಶವನ್ನು ಬಳಸಿರಲಿಲ್ಲ" ಎಂದು ಫ್ಯಾಕ್ಟ್ ಚೆಕ್ ಘಟಕವು X ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News