×
Ad

ವಯನಾಡ್| ಕಠಿಣ ಪರಿಸ್ಥಿತಿ; ರಕ್ಷಣಾ ಕಾರ್ಯಾಚರಣೆ ನಿಧಾನ

Update: 2024-07-31 22:01 IST

PC : PTI

ವಯನಾಡ್: ಮುಂಡಕ್ಕೈ ಹಾಗೂ ಚೂರಲ್‌ಮಲದಲ್ಲಿ ದಟ್ಟ ಅವಶೇಷಗಳು ಹಾಗೂ ಕೆಸರಿನ ನಡುವೆ ರಕ್ಷಣಾ ಕಾರ್ಯಕರ್ತರು ದಾರಿ ಮಾಡಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹವಾಮಾನ ಆತಂಕ ರಹಿತವಾಗಿದೆ. ಅವಶೇಷಗಳು ಹಾಗೂ ಕೆಸರು ರಾಶಿಯ ಕಾರಣಕ್ಕೆ ಸ್ಥಳಕ್ಕೆ ವಾಹನ ಹಾಗೂ ಕಾಂಕ್ರಿಟ್ ಕಟ್ಟರ್‌ಗಳನ್ನು ಕೊಂಡೊಯ್ಯಲು ರಕ್ಷಣಾ ಕಾರ್ಯಕರ್ತರಿಗೆ ಸಾಧ್ಯವಾಗುತ್ತಿಲ್ಲ.

ಸಿಲುಕಿಕೊಂಡ ನಿವಾಸಿಗಳು ಹಾಗೂ ಸ್ವಯಂ ಸೇವಕರಿಗೆ ಆಹಾರ ಹಾಗೂ ನೀರನ್ನು ಕೆಳಗೆ ಹಾಕಲು ಸೇನಾ ಹೆಲಿಕಾಪ್ಟರ್‌ಗಳಿಗೆ ಬುಧವಾರ ಬೆಳಗ್ಗೆ ಸುಮಾರು 10.45ಕ್ಕೆ ಸಾಧ್ಯವಾಗಿದೆ.

ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ)ನ ಸೇನಾ ತಂಡ ಚೂರಲ್‌ಮಲ ಹಾಗೂ ಮುಂಡಕ್ಕೈಯ ನಡುವೆ ಸೇತುವೆ ನಿರ್ಮಿಸಲು ಆರಂಭಿಸಿದೆ. ಈ ಸೇತುವೆ ನಿರ್ಮಾಣ ಪೂರ್ಣಗೊಂಡ ಬಳಿಕವೇ ರಕ್ಷಣಾ ಕಾರ್ಯಕರ್ತರ ತಂಡ ಸಾರಿಗೆ ವಾಹನ, ಸಾಧನ, ಆಹಾರ ಹಾಗೂ ನೀರನ್ನು ಮುಂಡಕ್ಕೈಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News