ವಯನಾಡ್ ಭೂ ಕುಸಿತ ಪ್ರಕರಣ; ಆರು ಮಂದಿ ಮೃತ್ಯು
Update: 2024-07-30 09:05 IST
Photo: x.com/feedmileapp/
ವಯನಾಡು: ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಳವಾರ ಮುಂಜಾನೆ ಉಂಟಾದ ಭಾರೀ ಭೂಕುಸಿತದಲ್ಲಿ ಆರು ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ವಯನಾಡ್ ಜಿಲ್ಲೆಯ ಮೇಪ್ಪಾಡಿ, ಮುಂಡಕೈ ಪಟ್ಟಣ ಮತ್ತು ಚೂರಲ್ ಮಲ ಎಂಬ ಮೂರು ಪ್ರದೇಶದಲ್ಲಿ ಇಂದು ಬೆಳಗ್ಗಿನ ಜಾವ ಭಾರೀ ಭೂಕುಸಿತ ಸಂಭವಿಸಿದೆ.
ಮುಂಡಕೈ ಪೇಟೆಯಲ್ಲಿ ಬೆಳಗಿನ ಜಾವ ಸರಿಸುಮಾರು 4 ಗಂಟೆ ಸುಮಾರಿಗೆ ಸುರಿದ ಭಾರೀ ಮಳೆಗೆ ಮೊದಲ ಭೂಕುಸಿತ ಸಂಭವಿಸಿದೆ. ಇದರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಚೂರಲ್ ಮಲ ಶಾಲೆಯ ಬಳಿ ಎರಡನೇಯ ಭೂಕುಸಿತ ಸಂಭವಿಸಿದೆ.