×
Ad

ಅಯೋಧ್ಯೆಯಂತೆ ಗುಜರಾತಿನಲ್ಲೂ ಮೋದಿ ಮತ್ತು ಬಿಜೆಪಿಯನ್ನು ನಾವು ಸೋಲಿಸುತ್ತೇವೆ: ರಾಹುಲ್ ಗಾಂಧಿ

Update: 2024-07-06 17:11 IST

ರಾಹುಲ್ ಗಾಂಧಿ (Photo credit:X/@PRMundru)

ಅಹ್ಮದಾಬಾದ್: ಕಾಂಗ್ರೆಸ್ ಗುಜರಾತಿನಲ್ಲಿ ಆಡಳಿತ ಬಿಜೆಪಿಯನ್ನು ಸೋಲಿಸಲಿದೆ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿಯವರು ಶನಿವಾರ ಇಲ್ಲಿ ಪ್ರತಿಪಾದಿಸಿದರು.

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರಾಹುಲ್, ‘ನಾವೆಲ್ಲ ಒಂದಾಗಿ ಅವರನ್ನು ಗುಜರಾತಿನಲ್ಲಿ ಸೋಲಿಸಲಿದ್ದೇವೆ. ಅಯೋಧ್ಯೆಯಂತೆ ಗುಜರಾತಿನಲ್ಲಿಯೂ ನಾವು ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಸೋಲಿಸುತ್ತೇವೆ’ ಎಂದು ಹೇಳಿದರು.

ಇಂಡಿಯಾ ಮೈತ್ರಿಕೂಟವು ಎಲ್.ಕೆ.ಆಡ್ವಾಣಿಯವರು ಆರಂಭಿಸಿದ್ದ ರಾಮ ಮಂದಿರ ಆಂದೋಲನವನ್ನು ಅಯೋಧ್ಯೆಯಲ್ಲಿ ಸೋಲಿಸಿದೆ. ವಿಮಾನ ನಿಲ್ದಾಣ ನಿರ್ಮಾಣಗೊಂಡಾಗ ಅಯೋಧ್ಯೆಯ ರೈತರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. ರಾಮ ಮಂದಿರ ಉದ್ಘಾಟನೆಗೆ ಅಯೋಧ್ಯೆಯ ಯಾರನ್ನೂ ಆಹ್ವಾನಿಸದಿರುವುದು ಅಲ್ಲಿಯ ಜನರಲ್ಲಿ ಅಸಮಾಧಾನವನ್ನು ಮೂಡಿಸಿತ್ತು. ರಾಮ ಮಂದಿರ ಕೇಂದ್ರಬಿಂದುವಾಗಿದ್ದ ಆಂದೋಲನವನ್ನು ಇಂಡಿಯಾ ಮೈತ್ರಿಕೂಟವು ಅಯೋಧ್ಯೆಯಲ್ಲಿಯೇ ಸೋಲಿಸಿದೆ ಎಂದರು.

ಗುಜರಾತಿಗೆ ತನ್ನ ಭೇಟಿ ಸಂದರ್ಭದಲ್ಲಿ ರಾಹುಲ್ ರಾಜಕೋಟ್ ಗೇಮ್ ರೆನ್ ಅಗ್ನಿ ಅವಘಡ, ವಡೋದರಾದಲ್ಲಿ ಬೋಟ್ ಮುಳುಗಡೆ ಮತ್ತು ಮೊರ್ಬಿ ಸೇತುವೆ ಕುಸಿತದಂತಹ ಇತ್ತೀಚಿನ ದುರಂತಗಳಿಂದ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News