×
Ad

ಜೆಡಿಯು ಪಕ್ಷವು ಎನ್‌ಡಿಎಯೊಂದಿಗೆ ಇದೆ: ಜೆಡಿಯು ನಾಯಕ ಕೆ.ಸಿ. ತ್ಯಾಗಿ

Update: 2024-06-05 14:04 IST

ಕೆ.ಸಿ. ತ್ಯಾಗಿ |  PC: ANI 

ಹೊಸದಿಲ್ಲಿ: ಜೆಡಿಯು ಪಕ್ಷವು ಎನ್‌ಡಿಎಯೊಂದಿಗೆ ಇದೆ ಹಾಗೂ ಎನ್‌ಡಿಎಯೊಂದಿಗೆ ಮುಂದುವರಿಯಲಿದೆ ಎಂದು ಜೆಡಿಯು ಪಕ್ಷದ ವಕ್ತಾರ ಕೆ.ಸಿ.ತ್ಯಾಗಿ ಸ್ಪಷ್ಟಪಡಿಸಿದ್ದಾರೆ.

“ನಾವು ನಮ್ಮ ಹಿಂದಿನ ನಿಲುವನ್ನು ಮುಂದುವರಿಸಲಿದ್ದೇವೆ. ನಿತೀಶ್ ಕುಮಾರ್ ನಾಯಕತ್ವದಲ್ಲಿ ಜೆಡಿಯು ಮತ್ತೆ ಎನ್ಡಿಎಗೆ ತನ್ನ ಬೆಂಬಲ ವ್ಯಕ್ತಪಡಿಸಿದೆ. ನಾವು ಎನ್‌ಡಿಎಯೊಂದಿಗೆ ಇದ್ದೇವೆ ಹಾಗೂ ಎನ್‌ಡಿಎಯೊಂದಿಗೆ ಮುಂದುವರಿಯಲಿದ್ದೇವೆ” ಎಂದು ಅವರು ಪುನರುಚ್ಚರಿಸಿದ್ದಾರೆ.

ಬಿಹಾರ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಜೆಡಿಯು 12 ಸ್ಥಾನ ಗಳಿಸಿದ್ದು, ಬಿಜೆಪಿ 12 ಸ್ಥಾನ ಗಳಿಸಿದೆ. ಇಡೀ ದೇಶಾದ್ಯಂತ 240 ಸ್ಥಾನಗಳನ್ನು ಗಳಿಸಿರುವ ಬಿಜೆಪಿ, ತನ್ನ ಮೈತ್ರಿ ಪಕ್ಷಗಳ ನೆರವಿಲ್ಲದೆ ಸರಕಾರ ರಚಿಸಲಾಗದ ಅಸಹಾಯಕ ಸ್ಥಿತಿಯಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News