×
Ad

ನಾವು ಕಷ್ಟಪಟ್ಟು ಕೆಲಸ ಮಾಡಿದರೂ ಯಶಸ್ವಿಯಾಗಿಲ್ಲ: ಅಶೋಕ್ ಗೆಹ್ಲೋಟ್

Update: 2023-12-03 21:23 IST

ಅಶೋಕ್ ಗೆಹ್ಲೋಟ್ (PTI)

ಜೈಪುರ: ಕಷ್ಟಪಟ್ಟು ಕೆಲಸ ಮಾಡಿದ ಹೊರತಾಗಿಯೂ ಕಾಂಗ್ರೆಸ್ ಸರಕಾರ ವಿಫಲವಾಗಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ರಾಜ್ಯದ ಜನಾದೇಶವನ್ನು ಕಾಂಗ್ರೆಸ್ ನಮ್ರತೆಯಿಂದ ಒಪ್ಪಿಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.

‘‘ಇದು ಪ್ರತಿಯೊಬ್ಬರಿಗೂ ಅನಿರೀಕ್ಷಿತ ಫಲಿತಾಂಶ’’ ಎಂದು ಗೆಹ್ಲೋಟ್ ಅವರು ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ಹೇಳಿದ್ದಾರೆ.

‘‘ಈ ಸೋಲು ನಾವು ನಮ್ಮ ಯೋಜನೆ, ಕಾನೂನು ಹಾಗೂ ಆವಿಷ್ಕಾರಗಳನ್ನು ಜನರತ್ತ ಕೊಂಡೊಯ್ಯುವುದರಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎಂಬುದನ್ನು ತೋರಿಸಿದೆ’’ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News