×
Ad

ತೂಕ ಇಳಿಕೆ ಔಷಧಿಗೆ ಭಾರೀ ಬೇಡಿಕೆ: ಮಧುಮೇಹ ರೋಗಿಗಳಿಗೆ ಸಮಸ್ಯೆ

Update: 2025-09-08 21:13 IST

ಸಾಂದರ್ಭಿಕ ಚಿತ್ರ | PC : freepik.com

ಹೊಸದಿಲ್ಲಿ,ಸೆ.8: ಟೈಪ್ 2 ಮಧುಮೇಹದ ಚಿಕಿತ್ಸೆಯಲ್ಲಿ ಪ್ರಾಥಮಿಕವಾಗಿ ಬಳಕೆಯಾಗುವ ಸೆಮಾಗ್ಲುಟೈಡ್ ಈಗ ತೂಕವನ್ನು ಕಡಿಮೆ ಮಾಡುವ ಬ್ಲಾಕ್‌ಬಸ್ಟರ್ ಔಷಧಿಯಾಗಿ ಮಾರ್ಪಟ್ಟಿದೆ. ಅದಕ್ಕಿರುವ ಹೆಚ್ಚಿನ ಬೇಡಿಕೆಯಿಂದಾಗಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅದನ್ನೇ ನಂಬಿಕೊಂಡಿದ್ದ ಮಧುಮೇಹಿಗಳಿಗೆ ಈ ಔಷಧಿ ಕೊರತೆಯ ಸಮಸ್ಯೆ ಎದುರಾಗಿದೆ ಎಂದು ಲ್ಯಾನ್ಸೆಟ್ ಡಯಾಬಿಟಿಸ್ ಆ್ಯಂಡ್ ಎಂಡೊಕ್ರೈನಾಲಜಿ ಜರ್ನಲ್‌ನಲ್ಲಿಯ ಇತ್ತೀಚಿನ ಲೇಖನವು ಹೆಳಿದೆ.

ವಯಸ್ಕರಲ್ಲಿ ಟೈಪ್ 2 ಮಧುಮೇಹ ಮತ್ತು ಬೊಜ್ಜಿನ ಚಿಕಿತ್ಸೆಗಾಗಿ ಅಭಿವೃದ್ಧಿಗೊಳಿಸಲಾಗಿದ್ದ ಔಷಧಿಗಳ ವರ್ಗವಾದ ಜಿಎಲ್‌ಪಿ-1 ರಿಸೆಪ್ಟರ್ ಅಗೊನಿಸ್ಟ್‌ಗಳು ಈಗ ತೂಕ ಇಳಿಕೆಗಾಗಿ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಗಮನಾರ್ಹವಾಗಿ ಸೆಮಾಗ್ಲುಟೈಡ್‌ಗೆ ಹೆಚ್ಚಿನ ಬೇಡಿಕೆಯು ಗ್ಲೈಸೆಮಿಕ್ ನಿಯಂತ್ರಣಕ್ಕಾಗಿ ಅದನ್ನು ಅವಲಂಬಿಸಿರುವ ಟೈಪ್ 2 ಮಧುಮೇಹಿಗಳಿಗೆ ಔಷಧಿಗಳ ಕೊರತೆಗೆ ಕಾರಣವಾಗಿದೆ ಎಂದು ಲೇಖನವು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News