×
Ad

ಪಶ್ಚಿಮಬಂಗಾಳ: ಹಿರಿಯ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ಬಿಎಸ್‌ಎಫ್ ಯೋಧ

Update: 2025-06-15 22:16 IST

ಸಾಂದರ್ಭಿಕ ಚಿತ್ರ | PTI

ಕೋಲ್ಕತ್ತಾ: ಪಶ್ಚಿಮಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿರುವ ಸೇನಾ ಶಿಬಿರದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ಯೋಧನೋರ್ವ ತನ್ನ ಹಿರಿಯ ಅಧಿಕಾರಿಯನ್ನು ಗುಂಡಿಕ್ಕಿ ಹತೈಗೈದಿದ್ದಾನೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಧುಲಿಯಾನದಲ್ಲಿರುವ ಗಡಿ ಭದ್ರತಾ ಪಡೆಯ ಶಿಬಿರದಲ್ಲಿ ಶನಿವಾರ ರಾತ್ರಿ ಸುಮಾರು 10.30ಕ್ಕೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಕಾವೇರಿದ ವಾಗ್ವಾದದ ಬಳಿಕ ಕಾನ್ಸ್‌ಟೇಬಲ್ ಶಿವಂ ಕುಮಾರ್ ಮಿಶ್ರಾ ಸೇವಾ ರೈಫಲ್‌ನಿಂದ ತನ್ನ ಹಿರಿಯ ಅಧಿಕಾರಿ, ಹೆಡ್ ಕಾನ್ಸ್‌ ಟೇಬಲ್ ರತನ್ ಸಿಂಗ್ ಶೇಖಾವತ್‌ನನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಎಂದು ಅವರು ಹೇಳಿದ್ದಾರೆ.

ಆರೋಪಿ ಕಾನ್ಸ್‌ಟೇಬಲ್ ಶಿವಂ ಕುಮಾರ್ ಮಿಶ್ರಾ ಅವರನ್ನು ಅನಂತರ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಸ್‌ಎಫ್ ಕೋರ್ಟ್ ಆಫ್ ಎನ್‌ ಕ್ವಯರಿಗೆ ಆದೇಶಿಸಿದೆ. ಘಟನೆಯ ಹಿಂದಿನ ನಿಖರ ಕಾರಣ ಇದುವರೆಗೆ ತಿಳಿದು ಬಂದಿಲ್ಲ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News