×
Ad

ಪಶ್ಚಿಮಬಂಗಾಳ: ಟಿಎಂಸಿ ಮಾಜಿ ಶಾಸಕ, ಇತರರ ನಿವಾಸಕ್ಕೆ ಐಟಿ ದಾಳಿ

Update: 2023-12-13 21:04 IST

ಸಾಂದರ್ಭಿಕ ಚಿತ್ರ | Photo : PTI 

ಕೋಲ್ಕತಾ: ಪಶ್ಚಿಮಬಂಗಾಳದ ವಿವಿಧೆಡೆ ಆಡಳಿತಾರೂಢ ಟಿಎಂಸಿಯ ಮಾಜಿ ಶಾಸಕ ಸೇರಿದಂತೆ ಹಲವು ಉದ್ಯಮಿಗಳ ನಿವಾಸಗಳಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.

ಹಲವು ವರ್ಷಗಳಿಂದ ತೆರಿಗೆ ಪಾವತಿಸದೆ ಇರುವುದರಿಂದ ಅನ್ಸೋಲ್, ದುರ್ಗಾಪುರ ಹಾಗೂ ರಾಣಿಗಂಜ್ ಪ್ರದೇಶದಲ್ಲಿರುವ ಉದ್ಯಮಿಗಳ ನಿವಾಸಗಳಿಗೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘‘ನಮ್ಮ ಅಧಿಕಾರಿಗಳು ನಿನ್ನೆ ದುರ್ಗಾಪುರಕ್ಕೆ ತಲುಪಿದ್ದಾರೆ ಹಾಗೂ ಉದ್ಯಮಿಗಳ ನಿವಾಸದಲ್ಲಿ ಬುಧವಾರ ಮುಂಜಾನೆ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಅವರು ಬ್ಯಾಂಕ್ ಸ್ಟೇಟ್‌ಮೆಂಟ್ ಹಾಗೂ ಇತರ ಸೊತ್ತಿನ ವಿವರ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.

ಟಿಎಂಸಿಯ ಮಾಜಿ ಶಾಸಕ ಸೊಹ್ರಾಬ್ ಅಲಿ ಹಾಗೂ ದಾಳಿಗೊಳಗಾದ ಮನೆಯ ಮಾಲಿಕರಾಗಿರುವ ಉದ್ಯಮಿಗಳೊಂದಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾತುಕತೆ ಕೂಡ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಶೋಧ ಕಾರ್ಯಾಚರಣೆ ನಡೆದ ಸಂದರ್ಭ ನಿವಾಸಗಳ ಹೊರಗೆ ಕೇಂದ್ರ ಭದ್ರತಾ ಪಡೆಯ ದೊಡ್ಡ ಸಂಖ್ಯೆಯ ಸಿಬ್ಬಂದಿ ರಕ್ಷಣೆ ನೀಡಿತ್ತು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News