×
Ad

ಪಶ್ಚಿಮ ಬಂಗಾಳ: ಬಿಜೆಪಿ ಸಚೇತಕನನ್ನು ಹೊರದಬ್ಬಿದ ಮಾರ್ಶಲ್‌ ಗಳು

Update: 2025-09-04 21:46 IST

ಶಂಕರ್ ಘೋಷ್‌ | PC :  PTI 

ಕೋಲ್ಕತ, ಸೆ. 4: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಗುರುವಾರ ಭಾರೀ ಬೆಳವಣಿಗೆಗಳು ಸಂಭವಿಸಿದವು. ಮೊದಲು ಬಿಜೆಪಿಯ ಮುಖ್ಯ ಸಚೇತಕ ಶಂಕರ್ ಘೋಷ್‌ರನ್ನು ಸ್ಪೀಕರ್ ಅಮಾನತುಗೊಳಿಸಿದರು ಹಾಗೂ ಬಳಿಕ, ಅವರು ಸದನದಿಂದ ಹೊರಹೋಗಲು ನಿರಾಕರಿಸಿದಾಗ ಮಾರ್ಶಲ್‌ಗಳ ಮೂಲಕ ಅವರನ್ನು ಹೊರಗೆ ದಬ್ಬಲಾಯಿತು.

ಬಂಗಾಳಿ ವಲಸಿಗರ ಮೇಲೆ ನಡೆಸಲಾಗುತ್ತಿದೆ ಎನ್ನಲಾದ ‘‘ದೌರ್ಜನ್ಯ’’ವನ್ನು ಪ್ರತಿಭಟಿಸಿ ಸರಕಾರ ಮಂಡಿಸಿದ ನಿರ್ಣಯವೊಂದರ ಕುರಿತ ಚರ್ಚೆಯ ವೇಳೆ, ಗದ್ದಲ ಎಬ್ಬಿಸಿದ ಆರೋಪದಲ್ಲಿ ಘೋಷ್‌ರನ್ನು ಸ್ಪೀಕರ್ ಬಿಮನ್ ಬ್ಯಾನರ್ಜಿ ದಿನದ ಉಳಿದ ಅವಧಿಗೆ ಸದನದಿಂದ ಅಮಾನತುಗೊಳಿಸಿದರು.

ನಿರ್ಣಯದ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಲು ಮುಂದಾದಾಗ ಬಿಜೆಪಿ ಶಾಸಕರು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿಯನ್ನು ಮಂಗಳವಾರ ಯಾಕೆ ಅಮಾನತುಗೊಳಿಸಲಾಯಿತು ಎಂದು ಬಿಜೆಪಿ ಶಾಸಕರು ಪ್ರಶ್ನಿಸಿದರು. ಆಗ ಪ್ರತಿಭಟನೆಯಲ್ಲಿ ಘೋಷ್ ಕೂಡ ಭಾಗವಹಿಸಿದರು. ಆಗ ಘೋಷ್‌ ರನ್ನು ಅಮಾನತುಗೊಳಿಸಲಾಯಿತು.

ಘೋಷ್ ಸದನದಿಂದ ಹೊರಹೋಗಲು ನಿರಾಕರಿಸಿದಾಗ ಮಾರ್ಶಲ್‌ ಗಳನ್ನು ಕರೆಸಲಾಯಿತು. ಅವರು ಬಿಜೆಪಿ ಸಚೇತಕನನ್ನು ಹೊರಗೆ ಎಳೆದುಕೊಂಡು ಹೋದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News