×
Ad

ಯಾರೇ ಹೊಸ ಪಕ್ಷ ಆರಂಭಿಸಿದರೂ ಅವರು ಡಿಎಂಕೆ ಪಕ್ಷದ ಅವನತಿ ಬಯಸುತ್ತಾರೆ: ನಟ ವಿಜಯ್ ವಿರುದ್ಧ ಸ್ಟಾಲಿನ್ ಪರೋಕ್ಷ ವಾಗ್ಧಾಳಿ

Update: 2024-11-04 15:04 IST

ನಟ ವಿಜಯ್ | PTI 

ತಮಿಳುನಾಡು: ಯಾರೇ ಹೊಸ ಪಕ್ಷ ಆರಂಭಿಸಿದರೂ, ಅವರು ಡಿಎಂಕೆ ಪಕ್ಷದ ಅವನತಿ ಬಯಸುತ್ತಾರೆ ಎಂದು ನಟ ವಿಜಯ್ ವಿರುದ್ಧ ಸ್ಟಾಲಿನ್ ಪರೋಕ್ಷವಾಗಿ ವಾಗ್ಧಾಳಿ ನಡೆಸಿದ್ದಾರೆ.

ಕೊಳತ್ತೂರ್ ವಿಧಾನಸಭಾ ಕ್ಷೇತ್ರದಲ್ಲಿ ಮಾತನಾಡಿದ ಸ್ಟಾಲಿನ್, ಹೊಸ ಪಕ್ಷವನ್ನು ಯಾರೇ ಪ್ರಾರಂಭಿಸಿದರೂ ಅವರು ಡಿಎಂಕೆ ಪಕ್ಷ ಅವನತಿಯಾಗಬೇಕೆಂದು ಬಯಸುತ್ತಾರೆ, ಅವರು ಡಿಎಂಕೆ ಪಕ್ಷದ ಬೆಳವಣಿಗೆಯನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಕಳೆದ 4 ವರ್ಷಗಳಲ್ಲಿನ ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಯೋಚಿಸಿ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ನಮ್ಮ ಪ್ರಯಾಣ ಜನರಿಗೆ ಒಳ್ಳೆಯದನ್ನು ಮಾಡುವುದಕ್ಕಾಗಿದೆ. ನಾವು ಅನಗತ್ಯ ವಿಷಯಗಳಿಗೆ ಪ್ರತಿಕ್ರಿಯಿಸಿ ನಮ್ಮ ಸಮಯವನ್ನು ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ.

ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ)ಪಕ್ಷವು ರವಿವಾರ ತಮಿಳುನಾಡಿನ ಡಿಎಂಕೆ ಸರಕಾರವನ್ನು ಮತ್ತು ಕೇಂದ್ರದಲ್ಲಿನ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಜಾತಿ ಸಮೀಕ್ಷೆಯನ್ನು ನಡೆಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿತ್ತು. ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಡಿಎಂಕೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News