×
Ad

ವೈಎಸ್ಆರ್ ಸಿಪಿ ಪಕ್ಷ ಸೇರಿದ 10 ದಿನಗಳಲ್ಲಿ ಅಂಬಟಿ ರಾಯುಡು ಪಕ್ಷ ಬಿಟ್ಟಿದ್ದೇಕೆ? ಮೌನ ಮುರಿದ ಭಾರತದ ಮಾಜಿ ಕ್ರಿಕೆಟಿಗ

Update: 2024-01-07 20:55 IST

ಅಮರಾವತಿ : ಆಂಧ್ರಪ್ರದೇಶದ ಅಧಿಕಾರದಲ್ಲಿರುವ ವೈ ಎಸ್ಆರ್ ಸಿ ಪಿ ಪಕ್ಷಕ್ಕೆ ಸೇರಿದ ಹತ್ತೇ ದಿನಗಳಲ್ಲಿ ಕ್ರಿಕೆಟಿಗ ಅಂಬಟಿ ರಾಯುಡು, ಪಕ್ಷ ತೊರೆದಿದ್ದಾರೆ. ಪಕ್ಷವನ್ನು ಬಿಟ್ಟಿದ್ದೇಕೆ ಎನ್ನುವುದರ ಹಿಂದಿನ ಭಾರತದ ಮಾಜಿ ಕ್ರಿಕೆಟ್ ಆಟಗಾರ ಅಂಬಟಿ ರಾಯುಡು ವಿವರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ ಅಂಬಟಿ ರಾಯುಡು, ದುಬೈನಲ್ಲಿ ನಡೆಯುವ ಐಎಲ್ಟಿ20 ಟೂರ್ನಮೆಂಟಿನಲ್ಲಿ, ಅವರು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಭಾಗವಾಗಿದ್ದಾರೆ. ಒಪ್ಪಂದದಂತೆ ವೃತ್ತಿಪರ ಆಟಗಾರರು ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸಬಾರದು. ಹಾಗಾಗಿ ನಾನು ರಾಜಕೀಯ ಸಂಬಂಧಗಳನ್ನು ತೊರೆಯುತ್ತಿದ್ದೇನೆ ಎಂದು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಾಯುಡು ಅವರನ್ನು ಡಿಸೆಂಬರ್ 28 ರಂದು ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ, ಉಪ ಮುಖ್ಯಮಂತ್ರಿ ಕೆ ನಾರಾಯಣ ಸ್ವಾಮಿ ಮತ್ತು ರಾಜಂಪೇಟೆ ಲೋಕಸಭಾ ಸದಸ್ಯ ಪಿ ಮಿಥುನ್ ರೆಡ್ಡಿ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿಕೊಳ್ಳಲಾಗಿತ್ತು.

"ನಾನು ವೈಎಸ್ಆರ್ಸಿಪಿ ಪಕ್ಷವನ್ನು ತ್ಯಜಿಸಿ, ಸ್ವಲ್ಪ ಸಮಯದವರೆಗೆ ರಾಜಕೀಯದಿಂದ ದೂರವಿರಲು ನಿರ್ಧರಿಸಿದ್ದೇನೆ. ಮುಂದಿನ ಕ್ರಮವನ್ನು ಸೂಕ್ತ ಸಮಯದಲ್ಲಿ ತಿಳಿಸಲಾಗುವುದು. ಧನ್ಯವಾದಗಳು." ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News