×
Ad

ಅಮೇಠಿಯಿಂದ ಸ್ಪರ್ಧಿಸುವರೇ ರಾಬರ್ಟ್ ವಾದ್ರಾ?

Update: 2024-04-04 22:07 IST

Photo: X \ @ANI

ಹೊಸದಿಲ್ಲಿ: “ತಾವು ಸಂಸದರಾಗಲು ಬಯಸಿದರೆ ಅಮೇಠಿ ಕ್ಷೇತ್ರವನ್ನು ಪ್ರತಿನಿಧಿಸುವಂತೆ ಕ್ಷೇತ್ರದ ಜನ ಬಯಸುತ್ತಿದ್ದಾರೆ” ಎಂದು ರಾಬರ್ಟ್ ವಾದ್ರಾ ಹೇಳಿದ್ಧಾರೆ.

ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, “ರಾಯ್ ಬರೇಲಿ, ಅಮೇಠಿ ಮತ್ತು ಸುಲ್ತಾನ್ಪುರ ಕ್ಷೇತ್ರಗಳ ಅಭಿವೃದ್ಧಿಗೆ ಗಾಂಧಿ ಕುಟುಂಬ ಶ್ರಮಿಸಿದೆ. ಹಾಲಿ ಸಂಸದರಿಂದ ಅಮೇಠಿಯ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಕೆಯನ್ನು(ಸ್ಮೃತಿ ಇರಾನಿ) ಆಯ್ಕೆ ಮಾಡಿ ನಾವು ತಪ್ಪು ಮಾಡಿದೆವು ಎಂದು ಪರಿತಪಿಸುತ್ತಿದ್ದಾರೆ ಎಂದು ವಾದ್ರಾ ಪ್ರತಿಕ್ರಿಯಿಸಿದ್ದಾರೆ.

ಈ ಮೂಲಕ ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್ ವಾದ್ರಾ ರಾಜಕೀಯ ಪ್ರವೇಶದ ಸೂಚನೆ ಕೊಟ್ಟಿದ್ದಾರೆ.

ಪ್ರಿಯಾಂಕಾ ಗಾಂಧಿ ಮೊದಲು ಸಂಸದರಾಗಬೇಕೆಂದು ಬಯಸುತ್ತೇನೆ. ಬಳಿಕ, ನಾನೂ ರಾಜಕೀಯಕ್ಕೆ ಬರಲು ಇಚ್ಛಿಸುತ್ತೇನೆ. ಜನರು ಮತ್ತು ವಿವಿಧ ಪಕ್ಷಗಳ ಸಂಸದರ ಜೊತೆ ಚರ್ಚೆ ನಡೆಸಿದ್ದೇನೆ. ಅವರೆಲ್ಲ ತಮ್ಮ ಪಕ್ಷವನ್ನು ಪ್ರತಿನಿಧಿಸುವಂತೆ ಒತ್ತಾಯಿಸಿದ್ದಾರೆ. ಅವರು ನನಗೆ ಬೆಂಬಲ ನೀಡುವ ಭರವಸೆ ಸಹ ಕೊಟ್ಟಿದ್ದಾರೆ. ಬೇರೆ ಬೇರೆ ಪಕ್ಷಗಳ ನಾಯಕರು ನನ್ನನ್ನು ಆಹ್ವಾನಿಸಿದ್ದಾರೆ. ಪಕ್ಷಬೇಧವಿಲ್ಲದೆ ಹಲವು ಪಕ್ಷಗಳಲ್ಲಿ ನನಗೆ ಗೆಳೆಯರಿದ್ದಾರೆ ಎಂದೂ ವಾದ್ರಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News