×
Ad

ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಜನ್ಮದಿನವನ್ನು ಆಚರಿಸಿದ ಕಾಂಗ್ರೆಸ್ ಸಂಸದರು

Update: 2025-07-21 13:18 IST

Photo:X/@INCIndia

ಹೊಸದಿಲ್ಲಿ: ರಾಜ್ಯಸಭಾ ವಿಪಕ್ಷ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಅವರ 83ನೇ ಜನ್ಮದಿನಾಚರಣೆಯನ್ನು ಇಂದು (ಸೋಮವಾರ) ಕಾಂಗ್ರೆಸ್ ಸಂಸದರು ಸಂಭ್ರಮದಿಂದ ಆಚರಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೂಗುಚ್ಛ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಜನ್ಮದಿನದ ಶುಭಾಶಯ ಕೋರಿದರು.

ಈ ವೇಳೆ, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಕಾಂಗ್ರೆಸ್ ಪಕ್ಷದ ವಿವಿಧ ಲೋಕಸಭಾ ಸಂಸದರು ಹಾಗೂ ರಾಜ್ಯಸಭಾ ಸಂಸದರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News