×
Ad

ಆತ್ಮಹತ್ಯೆ ಮಾಡಿಕೊಂಡ ಮಗಳು: ಅಳಿಯನ ಮನೆಗೆ ಬೆಂಕಿ ಇಟ್ಟ ಕುಟುಂಬಸ್ಥರು; ಅತ್ತೆ - ಮಾವ ಮೃತ್ಯು

Update: 2024-03-19 14:03 IST

Photo: NDTV

ಹೊಸದಿಲ್ಲಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಬೆನ್ನಿಗೇ ಅವರ ಕುಟುಂಬದ ಸದಸ್ಯರು ಆಕೆಯ ಪತಿಯ ಮನೆಗೆ ಬೆಂಕಿ ಇಟ್ಟಿದ್ದು, ಈ ಘಟನೆಯಲ್ಲಿ ಮೃತ ಮಹಿಳೆಯ ಅತ್ತೆ-ಮಾವ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ರಾತ್ರಿ ತನ್ನ ಅತ್ತೆ ಮಾವನ ಮನೆಯಲ್ಲಿ ಅಂಶಿಕಾ ಕೇಸರ್ವಾನಿ ಎಂಬ ಮಹಿಳೆಯು ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಆಕೆ ಕಳೆದ ಫೆಬ್ರವರಿಯಲ್ಲಿ ವಿವಾಹವಾಗಿದ್ದಳು ಎಂದು ಹೇಳಲಾಗಿದೆ.

ಅಂಶಿಕಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೆ, ಆಕೆಯ ಅತ್ತೆ ಮಾವನ ಮನೆಗೆ ದೌಡಾಯಿಸಿರುವ ಆಕೆಯ ಸಂಬಂಧಿಕರು, ಯುವತಿಗೆ ವರದಕ್ಷಿಣೆ ಕಿರುಕುಳ ನೀಡಿರುವುದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.

ಈ ವೇಳೆ ಅಂಶಿಕಾ ಸಂಬಂಧಿಕರು ಆಕೆಯ ಅತ್ತೆ-ಮಾವನ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಆಕೆಯ ಅತ್ತೆ-ಮಾವ ಇಬ್ಬರೂ ಬೆಂಕಿಗಾಹುತಿಯಾಗಿದ್ದಾರೆ.

ಮೃತರನ್ನು ರಾಜೇಂದ್ರ ಕೇಸರ್ವಾನಿ ಹಾಗೂ ಶೋಭಾ ದೇವಿ ಎಂದು ಗುರುತಿಸಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News