×
Ad

ಅಗ್ನಿವೀರ್ ತರಬೇತಿ ಪಡೆಯುತ್ತಿದ್ದ ಕೇರಳದ ಯುವತಿ ಆತ್ಮಹತ್ಯೆ

Update: 2023-11-29 14:11 IST

ಮುಂಬೈ: ಅಗ್ನಿವೀರ್ (Agniveer) ತರಬೇತಿ ಪಡೆಯುತ್ತಿದ್ದ 20 ವರ್ಷದ ಯುವತಿಯೊಬ್ಬಳು ಮುಂಬೈನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಕೇರಳ ಮೂಲದ ಯುವತಿ, ನೌಕಾಪಡೆ ತರಬೇತಿ ಪಡೆಯಲು ಎರಡು ವಾರಗಳ ಹಿಂದೆ ಮುಂಬೈಗೆ ಬಂದಿದ್ದಳು ಎಂದು ಅವರು ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಯುವತಿ ಮತ್ತು ಆಕೆಯ ಗೆಳೆಯ ಜಗಳವಾಡಿದ್ದು, ಬಳಿಕ ಆತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಲಾಡ್ ವೆಸ್ಟ್‌ನ ಐಎನ್‌ಎಸ್ ಹಮ್ಲಾ ಬೇಸ್‌ನಲ್ಲಿರುವ ಆಕೆಯ ಕೋಣೆಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.

ಮಾಳವಾನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News