×
Ad

ಮಹಾ ಕುಂಭ ಮೇಳ | ಮಹಿಳೆಯರ ಸ್ನಾನದ ವಿಡಿಯೊಗಳ ಮಾರಾಟ ಅರೋಪ: 13 ಪ್ರಕರಣ ದಾಖಲು

Update: 2025-02-22 14:42 IST

ಸಾಂದರ್ಭಿಕ ಚಿತ್ರ (PTI)

ಪ್ರಯಾಗ್ ರಾಜ್: ಮಹಾ ಕುಂಭ ಮೇಳದಲ್ಲಿ ಮಹಿಳೆಯರು ಮಿಂದೇಳುವಾಗ, ಅವರು ಬಟ್ಟೆ ಬದಲಿಸುವಾಗ, ಕೆಲವು ಕಿಡಿಗೇಡಿಗಳು ಅವರ ಫೋಟೊ, ವಿಡಿಯೊಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ 13 ಎಫ್ಐಆರ್ ಗಳನ್ನು ದಾಖಲಿಸಿಕೊಂಡು, 103 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಪ್ರಯಾಗ್ ರಾಜ್ ಪೊಲೀಸರು ತಿಳಿಸಿದ್ದಾರೆ.

ಸ್ಪೈ ಕ್ಯಾಮೆರಾಗಳ ಮೂಲಕ ಇಂತಹ ಫೋಟೊ, ವಿಡಿಯೊಗಳನ್ನು ಚಿತ್ರೀಕರಿಸಿ, ಅವನ್ನು ಡಾರ್ಕ್ ವೆಬ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ, ಸ್ನಾನಘಟ್ಟಗಳಲ್ಲಿ ಫೋಟೊ, ವಿಡಿಯೊ ಚಿತ್ರೀಕರಿಸುವವರ ಮೇಲೆ ಕಣ್ಣಿಡಲು ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News