×
Ad

ದುಡಿಯುತ್ತಿರುವ ಅತ್ತೆಯಂದಿರಿಂದಾಗಿ ಭಾರತದಲ್ಲಿ ಉದ್ಯೋಗಿ ಮಹಿಳೆಯರ ಸಂಖ್ಯೆ ಹೆಚ್ಚಳ:ಅಧ್ಯಯನ

Update: 2023-09-24 22:43 IST

                                                                  Photo: NDTV 

ಹೊಸದಿಲ್ಲಿ : ತಮ್ಮ ಅತ್ತೆಯಂದಿರು ಉದ್ಯೋಗದಲ್ಲಿದ್ದರೆ ಭಾರತದಲ್ಲಿಯ ಮಹಿಳೆಯರು ಔಪಚಾರಿಕ ಉದ್ಯೋಗಗಳನ್ನು ಹುಡುಕಿಕೊಳ್ಳುವ ಸಾಧ್ಯತೆಯು ಹೆಚ್ಚು ಎನ್ನುವುದನ್ನು ನೂತನ ಅಧ್ಯಯನವೊಂದು ಕಂಡುಕೊಂಡಿದೆ.

ಅಝೀಂ ಪ್ರೇಮಜಿ ವಿವಿಯು ಈ ವಾರ ಬಿಡುಗಡೆಗಳಿಸಿರುವ ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2023 ವರದಿಯಂತೆ ಅತ್ತೆ ಉದ್ಯೋಗದಲ್ಲಿರುವ ನಗರ ಪ್ರದೇಶಗಳಲ್ಲಿಯ ಕುಟುಂಬಗಳಲ್ಲಿ ಸೊಸೆಯಂದಿರು ಉದ್ಯೋಗದಲ್ಲಿರುವ ಸಾಧ್ಯತೆಯು ಶೇ.70ಕ್ಕೂ ಹೆಚ್ಚಿದ್ದರೆ,ಗ್ರಾಮೀಣ ಪ್ರದೇಶಗಳಲ್ಲಿ ಈ ಸಾಧ್ಯತೆಯು ಶೇ.50ಕ್ಕೂ ಹೆಚ್ಚಿದೆ.

ಸಾಂಪ್ರದಾಯಿಕವಾಗಿ ಮದುವೆಯ ಬಳಿಕ ಪತಿಯ ಮನೆಗೆ ತೆರಳುವ ಭಾರತೀಯ ಯುವ ಮಹಿಳೆಯರು ತಮ್ಮ ಅತ್ತೆಯಂದಿರ ಬಗ್ಗೆ ಭಯವನ್ನು ಅಥವಾ ಗೌರವವನ್ನು ಹೊಂದಿರುತ್ತಾರೆ. ಕಾರ್ಮಿಕ ಪಡೆಯಲ್ಲಿ ಅರ್ಧದಷ್ಟು ಭಾಗವನ್ನು ಹೊಂದಿರಬಹುದಾದ ಭಾರತೀಯರ ಮಹಿಳೆಯರ ಜೀವನಗಳಲ್ಲಿ ಬಲವಾದ ಅಂತರ್‌ಪೀಳಿಗೆ ಪರಿಣಾಮದಿಂದ ಪ್ರಭಾವಿತವಾಗಿರುವ ಲಿಂಗ ನಿಯಮಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ಸಾಂಕ್ರಾಮಿದಿಂದಾಗಿ ಹೆಚ್ಚೆಚ್ಚು ಮಹಿಳೆಯರು ಸ್ವಯಂ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ಕೋವಿಡ್‌ಗೆ ಮುನ್ನ ಶೇ.50 ರಷ್ಟಿದ್ದ ಇಂತಹ ಮಹಿಳೆಯರ ಸಂಖ್ಯೆ ಶೇ.60ಕ್ಕೆ ಏರಿಕೆಯಾಗಿದ್ದು,ಇದರ ಪರಿಣಾಮವಾಗಿ ನೈಜ ಗಳಿಕೆಯಲ್ಲಿ ಇಳಿಕೆಯಾಗಿದೆ ಎಂದೂ ವರದಿಯು ಹೇಳಿದೆ.

ಭಾರತದಲ್ಲಿ ಮಹಿಳೆಯರು ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚುತ್ತಿದೆ,ಆದರೆ ಸರಿಯಾದ ಕಾರಣಗಳಿಂದಲ್ಲ ಎಂದು ಹೇಳಿರುವ ಸಹಾಯಕ ಪ್ರೊಫೆಸರ್ ಅಮಿತ್ ಬಸೋಲೆಯವರ ನೇತೃತ್ವದಲ್ಲಿ ಸಿದ್ಧಪಡಿಸಲಾದ ವರದಿಯು,2020ರ ಲಾಕಡೌನ್‌ನ ಎರಡು ವರ್ಷಗಳ ನಂತರವೂ ಸ್ವಯಂ ಉದ್ಯೋಗ ಗಳಿಕೆಗಳು 2019ರ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಇದ್ದ ಗಳಿಕೆಗೆ ಹೋಲಿಸಿದರೆ ಕೇವಲ ಶೇ.85ರಷ್ಟಿವೆ ಎಂದು ತಿಳಿಸಿದೆ.

ಸಾಂಕ್ರಾಮಿಕ ಸಂದರ್ಭದಲ್ಲಿ ಭಾರತೀಯ ಮಹಿಳೆಯರು ಉದ್ಯೋಗ ನಷ್ಟ ಮತ್ತು ವೇತನ ವಿಷಯಗಳಲ್ಲಿ ಅಸಮಾನತೆಯನ್ನು ಅನುಭವಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News