×
Ad

ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ಗೆ ತವರಿನಲ್ಲಿ ಭವ್ಯ ಸ್ವಾಗತ

Update: 2024-12-16 16:23 IST

ಗುಕೇಶ್ ದೊಮ್ಮರಾಜು | PTI  

ಚೆನ್ನೈ: ವಿಶ್ಚ ಚೆಸ್ ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಂಡು ಇಂದು (ಸೋಮವಾರ) ತವರಿಗೆ ಮರಳಿದ ಭಾರತದ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ದೊಮ್ಮರಾಜುಗೆ ಭವ್ಯ ಸ್ವಾಗತ ನೀಡಲಾಯಿತು.

ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಗುಕೇಶ್ ದೊಮ್ಮರಾಜು ಅವರಿಗೆ ಅವರ ಅಭಿಮಾನಿಗಳು, ಸ್ನೇಹಿತರು ಹಾಗೂ ರಾಜ್ಯ ಸರಕಾರದ ಅಧಿಕಾರಿಗಳು ಸ್ವಾಗತ ಕೋರಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗುಕೇಶ್, "ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ನನಗೆ ನಿಮ್ಮ ಪ್ರೀತಿ ಮತ್ತು ಬೆಂಬಲವೇ ಹೆಚ್ಚು ಶಕ್ತಿ ನೀಡಿತು" ಎಂದು ಹೇಳಿದರು.

ವಿಶ್ವನಾಥನ್ ಆನಂದ್ ನಂತರ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡ ಎರಡನೆ ಭಾರತೀಯ ಎಂಬ ಹಿರಿಮೆಗೆ ಗುಕೇಶ್ ದೊಮ್ಮರಾಜು ಭಾಜನರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News