ಫೆಬ್ರವರಿಯಲ್ಲಿ ಡಬ್ಲ್ಯುಪಿಎಲ್, ಒಂದೇ ರಾಜ್ಯದಲ್ಲಿ ಟೂರ್ನಿ: ಜಯ್ ಶಾ
Update: 2023-12-09 22:42 IST
ಜಯ್ ಶಾ, Photo:PTI
ಹೊಸದಿಲ್ಲಿ: ಮುಂಬರುವ 2ನೇ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ಮೊದಲ ಆವೃತ್ತಿಯ ಮಾದರಿಯನ್ನು ಅನುಸರಿಸಲಿದ್ದು, ಎಲ್ಲ ಪಂದ್ಯಗಳು ಒಂದೇ ರಾಜ್ಯದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶನಿವಾರ ದೃಢಪಡಿಸಿದರು.
2024ರ ಫೆಬ್ರವರಿ 2ನೇ ಅಥವಾ ಮೂರನೇ ವಾರದಲ್ಲಿ ಲೀಗ್ ಆರಂಭವಾಗಲಿದೆ ಎಂದು ಡಬ್ಲ್ಯುಪಿಎಲ್ ಸಮಿತಿಯ ಸಂಚಾಲಕರಾಗಿರುವ ಶಾ ಇದೇ ವೇಳೆ ಬಹಿರಂಗಪಡಿಸಿದರು.
ಡಬ್ಲ್ಯುಪಿಎಲ್ ಅನ್ನು ಮುಂದಿನ ವರ್ಷ ವಿವಿಧ ನಗರದಲ್ಲಿ ಆಯೋಜಿಸುವ ಕುರಿತು ಆರಂಭದಲ್ಲಿ ಚರ್ಚಿಸಲಾಗಿತ್ತು. ಒಂದೇ ರಾಜ್ಯದಲ್ಲಿ ಟೂರ್ನಿ ನಡೆಸಿದರೆ ಸಾರಿಗೆ ವಿಚಾರದಲ್ಲಿ ಲಾಭವಾಗಲಿದೆ ಎಂದು ಶಾ ಒತ್ತಿ ಹೇಳಿದ್ದಾರೆ.