×
Ad

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್‌ ಭೂಷಣ್ ಸಿಂಗ್‌ ವಿರುದ್ಧ ಆರೋಪ ರೂಪಿಸುವಿಕೆ ಪ್ರಕ್ರಿಯೆ ಮುಂದೂಡಿದ ನ್ಯಾಯಾಲಯ

Update: 2024-04-18 16:33 IST

ಬ್ರಿಜ್‌ ಭೂಷಣ್ ಸಿಂಗ್‌ | PC : NDTV 

ಹೊಸದಿಲ್ಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ ಭಾರತದ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಆರೋಪ ಪಟ್ಟಿ ದಾಖಲಿಸುವುದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ದಿಲ್ಲಿಯ ನ್ಯಾಯಾಲಯ ಇಂದು ಮುಂದೂಡಿದೆ.

ದೂರುದಾರರೊಬ್ಬರ ಆರೋಪದಂತೆ ಘಟನೆ ನಡೆದಿತ್ತೆನ್ನಲಾದ ದಿನವಾದ ಸೆಪ್ಟೆಂಬರ್‌ 7, 2022ರಂದು ತಾನು ದಿಲ್ಲಿಯಲ್ಲಿರಲಿಲ್ಲ ಎಂದು ಹೇಳಿಕೊಂಡು ಪುರಾವೆಯನ್ನು ಇನ್ನಷ್ಟು ಪರಿಶೀಲಿಸಬೇಕೆಂದು ಕೋರಿ ಸಿಂಗ್‌ ಅರ್ಜಿ ಸಲ್ಲಿಸಿದ ನಂತರ ಕೋರ್ಟ್‌ ಮೇಲಿನ ನಿರ್ಧಾರ ಕೈಗೊಂಡಿದೆ.

ಪ್ರಕರಣದ ವಿಚಾರಣೆಯನ್ನು ಎಪ್ರಿಲ್‌ 26ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ.

ಘಟನೆ ನಡೆದಾಗ ಸಿಂಗ್‌ ವಿದೇಶದಲ್ಲಿದ್ದರಿಂದ ಇನ್ನಷ್ಟು ತನಿಖೆ ನಡೆಸಬೇಕು ದಿಲ್ಲಿ ಪೊಲೀಸರಿಗೆ ಕರೆ ವಿವರ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಬೇಕೆಂದೂ ಸಿಂಗ್‌ ಅವರ ಅರ್ಜಿಯಲ್ಲಿ ಕೋರಲಾಗಿದೆ.

ದಿಲ್ಲಿ ಪೊಲೀಸರ ಪರ ವಕೀಲ ಸಿಂಗ್‌ ಅರ್ಜಿಗೆ ಆಕ್ಷೇಪಿಸಿದ್ದು ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸಲು ಈ ತಂತ್ರಗಾರಿಕೆ ಅನುಸರಿಸಲಾಗಿದೆ ಎಂದು ಆರೋಪಿಸಿದರು.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಲು ದೊರೆತ ಯಾವುದೇ ಅವಕಾಶ ಸಿಂಗ್‌ ತಪ್ಪಿಸಿಕೊಂಡಿರಲಿಲ್ಲ ಅವರ ವಿರುದ್ಧ ಆರೋಪ ಪಟ್ಟಿ ಹೊರಿಸಲು ಸೂಕ್ತ ಸಾಕ್ಷ್ಯಗಳಿವೆ ಎಂದು ದಿಲ್ಲಿ ಪೊಲೀಸರು ಈ ಹಿಂದೆ ನ್ಯಾಯಾಲಯಕ್ಕೆ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News