30 ಕೋಟಿ ರೂ.ಮೌಲ್ಯದ ಯಾಬಾ ಮಾತ್ರೆಗಳು ವಶ, ಓರ್ವನ ಬಂಧನ: ಅಸ್ಸಾಂ ಸಿಎಂ
Update: 2025-03-11 20:37 IST
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ | PC : PTI
ಗುವಾಹಟಿ : 30 ಕೋಟಿ ರೂ.ಮೌಲ್ಯದ ಮಾದಕ ವಸ್ತು ಯಾಬಾ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದ್ದು,ಇದಕ್ಕೆ ಸಂಬಂಧಿಸಿದಂತೆ ಕಾಚಾರ್ ಜಿಲ್ಲೆಯ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಸೋಮವಾರ ರಾತ್ರಿ ಲಖಿಪುರ ಪೋಲೀಸ್ ಠಾಣಾ ವ್ಯಾಪ್ತಿಯ ಕಾಕ್ಮಾರಾದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 30 ಕೋಟಿ ರೂ.ಮೌಲ್ಯದ 98,000 ಯಾಬಾ ಮಾತ್ರೆಗಳು ಮತ್ತು 3.5 ಲಕ್ಷ ರೂ.ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶರ್ಮಾ ಮಂಗಳವಾರ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
‘ಕ್ರೇಝಿ ಮೆಡಿಸಿನ್’ ಎಂದೂ ಕರೆಯಲಾಗುವ ಯಾಬಾ ಮೆಥಾಮ್ಫೆಟಮಿನ್ ಮತ್ತು ಕೆಫೀನ್ ಸಂಯೋಜನೆಯಾಗಿದ್ದು, ದೇಶದಲ್ಲಿ ಅದು ಕಾನೂನುಬಾಹಿರವಾಗಿದೆ.