×
Ad

ಕೇರಳ: ಯುವಕನನ್ನು ಥಳಿಸಿ ಹತ್ಯೆಗೈದ ಗುಂಪು

Update: 2025-04-27 13:18 IST

ಸೂರಜ್ (Photo credit: madhyamamonline.com) 

ಕೋಝಿಕ್ಕೋಡ್: ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ಯುವಕನನ್ನು ಗುಂಪೊಂದು ಥಳಿಸಿ ಹತ್ಯೆ ಮಾಡಿರುವ ಘಟನೆ ಕೋಝಿಕ್ಕೋಡ್‌ನ ಪಾಲಕ್ಕೊಟ್ಟುವಯಲ್‌ನ ಪಾಲಕ್ಕಂಡಿಯಲ್ಲಿ ನಡೆದಿದೆ.

ಅಂಬಲಕಂಡಿ ಮೂಲದ ಬಾಬಿ ಎಂಬವರ ಪುತ್ರ ಸೂರಜ್ (20) ಹತ್ಯೆಗೀಡಾದ ಯುವಕ. ನಿನ್ನೆ ರಾತ್ರಿ ಸೂರಜ್ ಹಾಗೂ ಆತನ ಗೆಳೆಯರ ನಡುವೆ ಜಗಳ ನಡೆದಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ದಾಳಿಗೂ ಈ ಜಗಳಕ್ಕೂ ಸಂಬಂಧವಿದೆ ಎಂದು ಹೇಳಲಾಗಿದೆ.

ವರದಿ ಪ್ರಕಾರ, 15 ಮಂದಿಯಿದ್ದ ಗುಂಪು ಸೂರಜ್ ಮೇಲೆ ದಾಳಿ ನಡೆಸಿದೆ.

ಘಟನೆಗೆ ಸಂಬಂಧಿಸಿ ಮೂವರನ್ನು ಚೇವಾಯೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News