×
Ad

ಉತ್ತರಪ್ರದೇಶ |ಕೇಸರಿ ವಸ್ತ್ರ ಧರಿಸಿ ಮಾಂಸಾಹಾರ ಸೇವಿಸುತ್ತಿದ್ದವರ ಮೇಲೆ ಹಲ್ಲೆ!; ವಿಡಿಯೋ ವೈರಲ್

Update: 2025-08-19 20:22 IST

Screengrab : X \ @LadaiJhagda

ಲಕ್ನೋ : ಉತ್ತರಪ್ರದೇಶದ ಲಕ್ನೋದ ಡಾಬಾವೊಂದರಲ್ಲಿ‌ ಕೇಸರಿ ವಸ್ತ್ರ ಮಾಂಸಾಹಾರ ಸೇವಿಸುತ್ತಿದ್ದವರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ವೀಡಿಯೊ ವೈರಲ್ ಆಗಿದೆ.

ಈ ಘಟನೆ ರವಿವಾರ ರಾತ್ರಿ 10.30ರ ಸುಮಾರಿಗೆ ನಗರದ ಗೋಸಾಯಿಗಂಜ್ ಪ್ರದೇಶದಲ್ಲಿರುವ ಡಾಬಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಕೇಸರಿ ವಸ್ತ್ರವನ್ನು ಧರಿಸಿದ ವ್ಯಕ್ತಿಯು ಕೋಳಿ ಮಾಂಸ ಸೇವಿಸಿದ ವಿಚಾರಕ್ಕೆ ವಾಗ್ವಾದ ಮತ್ತು ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಧಾರ್ಮಿಕ ಉಡುಪನ್ನು ಧರಿಸಿ ಮಾಂಸಾಹಾರ ಸೇವಿಸಿರುವುದಕ್ಕೆ ಅವರು ಆಕ್ಷೇಪಿಸಿದ್ದರು ಎಂದು ತಿಳಿದು ಬಂದಿದೆ.

ಹಲ್ಲೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಲಕ್ನೋ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News