×
Ad

ದಿಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ನಿರೀಕ್ಷೆಗಿಂತ ಹೆಚ್ಚಿನ ಮತ ಗಳಿಸಿದ ಯೂಟ್ಯೂಬರ್, ಪತ್ರಕರ್ತ ಮೇಘನಾದ್ !

Update: 2025-02-09 13:20 IST

ಮೇಘನಾದ್ 

ಹೊಸದಿಲ್ಲಿ: ಯೂಟ್ಯೂಬರ್, ಪತ್ರಕರ್ತ ಮೇಘನಾದ್ ಎಸ್ ದಿಲ್ಲಿ ಚುನಾವಣೆಯಲ್ಲಿ ಮಾಳವೀಯ ನಗರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿ ಎಲ್ಲರ ಗಮನ ಸೆಳೆದಿದ್ದರು.

ಯೂಟ್ಯೂಬ್ ನಲ್ಲಿ 81.7 ಸಾವಿರಕ್ಕೂ ಹೆಚ್ಚು ಚಂದಾದಾರರನ್ನು ಮತ್ತು ಎಕ್ಸ್ ನಲ್ಲಿ ಸುಮಾರು 2 ಲಕ್ಷ ಫಾಲೋವರ್ಸ್ ಗಳನ್ನು ಹೊಂದಿರುವ ಮೇಘನಾದ್ ಎಸ್, ದಿಲ್ಲಿ ಚುನಾವಣೆಯಲ್ಲಿ ಚುನಾವಣೆಯಲ್ಲಿ ಮಾಳವೀಯ ನಗರ ಕ್ಷೇತ್ರದಿಂದ ಘಟಾನುಗಟಿ ಅಭ್ಯರ್ಥಿಗಳ ಎದುರು ಕಣಕ್ಕಿಳಿದಿದ್ದರು. ಮತ ಎಣಿಕೆಯ ಸಮಯದಲ್ಲಿ ಅವರು ʼ141 ಮತಗಳು. ಇನ್ನೂ 4 ಸುತ್ತುಗಳು ಉಳಿದಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು 7 ಮತಗಳನ್ನು ನಿರೀಕ್ಷಿಸಿದ್ದೆʼ ಎಂದು ಟ್ವೀಟ್ ಮಾಡಿದರು.

ಅವರ ಪ್ರಚಾರ ಗೀತೆ, 'Dilli ka normie Neta' (ದಿಲ್ಲಿಯ ಸಾಮಾನ್ಯ ನಾಯಕ) ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿತ್ತು. ಅವರ ಪ್ರಚಾರ ಗೀತೆ ನಾಗರಿಕರ ಸಮಸ್ಯೆಗಳನ್ನು ಕೇಂದ್ರೀಕೃತವಾಗಿತ್ತು. ಪ್ರಚಾರ ಗೀತೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 38,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತ್ತು. ಆದರೆ, ಚುನಾವಣಾ ಫಲಿತಾಂಶದಲ್ಲಿ ಇದು ಮತಗಳಾಗಿ ಪರಿವರ್ತನೆಯಾಗಲಿಲ್ಲ. ಅವರು 192 ಮತಗಳನ್ನು ಪಡೆದಿದ್ದು, ಅದು ನೋಟಾಕ್ಕಿಂತಲೂ ಕಡಿಮೆಯಾಗಿತ್ತು.

ಚುನಾವಣಾಯಲ್ಲಿ ಮೇಘನಾದ್ ಸೋತರೂ, ಚುನಾವಣೆಯಲ್ಲಿ ಸ್ಪರ್ಧಿಸುವ ಅವರ ನಿರ್ಧಾರವು ವಾಸ್ತವತೆಯನ್ನು ಪ್ರಶ್ನಿಸುವ ಅವರ ದಿಟ್ಟ ಮತ್ತು ಶ್ಲಾಘನೀಯ ಪ್ರಯತ್ನವೆಂದು ಅನೇಕರು ಹೇಳಿದರು. ಹಾಸ್ಯ ಮತ್ತು ವಿಶ್ವಾಸಾರ್ಹತೆಯಿಂದ ಮಾಡಿದ ಅವರ ಚುನಾವಣಾ ಪ್ರಚಾರವೂ, ರಾಜಕೀಯ ಸಹಭಾಗಿತ್ವವನ್ನು ಸೂಚಿಸುತ್ತದೆ. ʼನಾನು ಸ್ವತಂತ್ರ ಅಭ್ಯರ್ಥಿಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ನನ್ನ ಪ್ರಾಥಮಿಕ ಗುರಿ ಒಂದು ಅಂಶವನ್ನು ಸಾಬೀತುಪಡಿಸುವುದು, ಸ್ಥಳೀಯ ನಾಯಕರು ಸ್ಥಳೀಯ ಸಮಸ್ಯೆಗಳನ್ನು ಉತ್ತಮವಾಗಿ ಪರಿಹರಿಸಬಹುದುʼ ಎಂದು ಮೇಘನಾದ್ ಸಂದರ್ಶನವೊಂದರಲ್ಲಿ ಹೇಳಿದ್ದರು.

ಮಾಳವೀಯ ನಗರ ಕ್ಷೇತ್ರದಲ್ಲಿ ಬಿಜೆಪಿ ದಿಲ್ಲಿ ಘಟಕದ ಮಾಜಿ ಮುಖ್ಯಸ್ಥ ಸತೀಶ್ ಉಪಾಧ್ಯಾಯ ಗೆಲುವನ್ನು ಸಾಧಿಸಿದ್ದಾರೆ. ಆಪ್ ಅಭ್ಯರ್ಥಿ ಸೋಮನಾಥ್ ಭಾರ್ತಿ ಎದುರು ಸತೀಶ್ ಉಪಾಧ್ಯಾಯ ಗೆಲುವನ್ನು ಸಾಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News