×
Ad

ANI ಸುದ್ದಿ ಸಂಸ್ಥೆಯಿಂದ ಕಾಪಿರೈಟ್ ಹೆಸರಲ್ಲಿ ಸುಲಿಗೆ; ಯೂಟ್ಯೂಬರ್ ಮೋಹಕ್ ಮಂಗಲ್ ಆರೋಪ

Update: 2025-05-26 13:23 IST

ಹೊಸದಿಲ್ಲಿ: ಜನಪ್ರಿಯ ಯೂಟ್ಯೂಬರ್ ಮತ್ತು ಎಜುಕೇಟರ್ ಮೋಹಕ್ ಮಂಗಲ್ ಅವರು ಪ್ರಮುಖ ಸುದ್ದಿ ಸಂಸ್ಥೆ ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ANI) ಕಾಪಿರೈಟ್ ಜಾರಿಯ ಸೋಗಿನಲ್ಲಿ ವ್ಯವಸ್ಥಿತ ಸುಲಿಗೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಅವರು ಮಾಡಿರುವ "ಡಿಯರ್ ANI" ಎಂಬ ಶೀರ್ಷಿಕೆಯ ವೀಡಿಯೊದಲ್ಲಿ, ANI ತನ್ನ ಯೂಟ್ಯೂಬ್ ಚಾನೆಲ್ ಮೇಲೆ ಹಲವಾರು ಕಾಪಿರೈಟ್ ಸ್ಟ್ರೈಕ್‌ಗಳನ್ನು ನೀಡಿದ್ದು, ನಂತರ ಸ್ಟ್ರೈಕ್‌ಗಳನ್ನು ರದ್ದುಗೊಳಿಸಲು ಮತ್ತು ಚಾನೆಲನ್ನು ಡಿಲೀಟ್ ಮಾಡುವುದರಿಂದ ತಪ್ಪಿಸಲು 45-50 ಲಕ್ಷ ರೂ. ಪಾವತಿ ಮಾಡುವಂತೆ ಕೇಳಿತು ಎಂದು ಮಂಗಲ್ ಆರೋಪಿಸಿದ್ದಾರೆ.

ಕೋಲ್ಕತ್ತಾ ಅತ್ಯಾಚಾರ ಪ್ರಕರಣದ ಕುರಿತು ಮಂಗಲ್ ಮಾಡಿದ ವೀಡಿಯೊದ ಮೇಲೆ ANI ಕಾಪಿರೈಟ್ ಸ್ಟ್ರೈಕ್ ಅನ್ನು ಕಳುಹಿಸಿದಾಗ ಸಮಸ್ಯೆ ಪ್ರಾರಂಭವಾಯಿತು ಎಂದು ಮಂಗಲ್ ವಿವರಿಸಿದ್ದಾರೆ. 16 ನಿಮಿಷಗಳ ವೀಡಿಯೊದಲ್ಲಿ ANI ಯ ಕೇವಲ 11 ಸೆಕೆಂಡುಗಳ ದೃಶ್ಯ ಬಳಸಲಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ. ಇದರ ನಂತರ ʼಆಪರೇಷನ್ ಸಿಂಧೂರ್‌ʼ ಕುರಿತ ಅವರ 38 ನಿಮಿಷಗಳ ವೀಡಿಯೊಗೆ ಎರಡನೇ ಸ್ಟ್ರೈಕ್ ಮಾಡಲಾಗಿದೆ. ಇದರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಒಳಗೊಂಡ 9 ಸೆಕೆಂಡುಗಳ ದೃಶ್ಯಗಳನ್ನು ಬಳಸಲಾಗಿದೆ. ಯೂಟ್ಯೂಬ್ ನೀತಿಯ ಪ್ರಕಾರ, ಮೂರು ಕಾಪಿರೈಟ್ ಸ್ಟ್ರೈಕ್‌ಗಳು ಚಾನೆಲ್ ಡಿಲೀಟ್ ಮಾಡಲು ಕಾರಣವಾಗಬಹುದು.

ಈ ಸಮಸ್ಯೆಯನ್ನು ಹೇಗೆ ಪರಿಹರಿಸಬೇಕೆಂದು ಮಂಗಲ್ ಅವರ ತಂಡ ANI ಅನ್ನು ಸಂಪರ್ಕಿಸಿದೆ. ANI ಉದ್ಯೋಗಿಗಳು ಸ್ಟ್ರೈಕ್‌ಗಳನ್ನು ತೆಗೆದುಹಾಕಲು ಮತ್ತು ANI ನ ದೃಶ್ಯಗಳನ್ನು ಬಳಸಿದ್ದಕ್ಕೆ ಎರಡು ವರ್ಷಗಳ ಸಬ್ಸ್ಕ್ರಿಪ್ಷನ್ ಗಾಗಿ 45 ಲಕ್ಷ ರೂಪಾಯಿ ಮತ್ತು GST ಪಾವತಿಸುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಮಂಗಳ್ ಆರೋಪಿಸಿದ್ದಾರೆ.

ಇಷ್ಟು ದೊಡ್ಡ ಮೊತ್ತದ ಕುರಿತು ವಿವರಗಳನ್ನು ಕೇಳಿದಾಗ, ANI ಪ್ರತಿನಿಧಿಯು ಪ್ರತಿ ಕಾಪಿರೈಟ್ ಸ್ಟ್ರೈಕ್‌ಗೆ 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, ಎಂಟು ವೀಡಿಯೊಗಳಿಗೆ 40 ಲಕ್ಷ ರೂಪಾಯಿ ವರೆಗೆ ಆಗಿದೆ. ಐಚ್ಛಿಕ ವಾರ್ಷಿಕ ಸಬ್ಸ್ಕ್ರಿಪ್ಷನ್ ಶುಲ್ಕವನ್ನು ಸಹ ನೀಡಲಾಗಿದೆ ಎಂದು ವಿವರಿಸಿದ್ದಾರೆ.

"ನೀವು ಸಬ್ಸ್ಕ್ರಿಪ್ಷನ್ ಒಂದು ವರ್ಷಕ್ಕೆ ಬಯಸಿದರೆ, 30 ಲಕ್ಷ ಪಾವತಿಸಿ. ನೀವು ಸಬ್ಸ್ಕ್ರಿಪ್ಷನ್ 2 ವರ್ಷಗಳವರೆಗೆ ಬಯಸಿದರೆ, 40 ಲಕ್ಷ ಪಾವತಿಸಿ" ಎಂದು ANI ಸಿಬ್ಬಂದಿ ಹೇಳಿರುವುದಾಗಿ ವರದಿಯಾಗಿದೆ. "ನಾವು ಬೇರೆ ವಿಧಾನ, ಆದಾಯವನ್ನು ಕ್ಲೈಮ್ ಮಾಡುವುದಿಲ್ಲ. ನಾವು ಸ್ಟ್ರೈಕ್ ಅನ್ನು ಹಾಕಿದ್ದೇವೆ" ಎಂದು ANI ಸಿಬ್ಬಂದಿ ಹೇಳಿದ್ದಾರೆ.

"ನನಗೆ ಮೋಹಕ್ ಮಂಗಲ್ ಅವರ ಚಾನೆಲ್ ಇಷ್ಟ, ಅದಕ್ಕಾಗಿಯೇ ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ. ಒಪ್ಪಂದವನ್ನು ಮಂಗಲ್ ಅವರಿಗೆ ಸಹಾಯವಾಗುವುದಕ್ಕಾಗಿ ಮಾಡಲಾಗುತ್ತಿದೆ ಎಂಬ ಧೋರಣೆಯನ್ನು ANI ಸಿಬ್ಬಂದಿ ತಾಳಿದ್ದಾರೆ ಎನ್ನಲಾಗಿದೆ.

ಮಂಗಲ್ ಈ ಧೋರಣೆಯನ್ನು ಸುಲಿಗೆ ಎಂದು ಕರೆದಿದ್ದಾರೆ. ANI ಸೈದ್ಧಾಂತಿಕ ಮಾರ್ಗಗಳಲ್ಲಿ ಹಲವಾರು ಕಂಟೆಂಟ್ ಕ್ರಿಯೇಟರ್ ಗಳ ಮೇಲೆ ಇದೇ ರೀತಿಯ ತಂತ್ರಗಳನ್ನು ಬಳಸಿದೆ ಎಂದು ಆರೋಪಿಸಿದ್ದಾರೆ. ಇತರ ಕಂಟೆಂಟ್ ಕ್ರಿಯೇಟರ್ ಗಳ ಮೇಲೆ 15 ರಿಂದ 22 ಲಕ್ಷ ರೂ.ಗಳ ವರೆಗೆ ಪಾವತಿಸಲು ಕೇಳಲಾಗಿತ್ತು. ಕೆಲವರು ಒಂದು ವರ್ಷಕ್ಕಾಗಿ 50 ಲಕ್ಷ ರೂಪಾಯಿ ಪಾವತಿಸಿದ್ದಾರೆ ಎಂದು ಹೇಳಲಾದ ಪ್ರಕರಣವನ್ನು ಅವರು ಉಲ್ಲೇಖಿಸಿದರು. "ಇದು ಕಾಪಿ ರೈಟ್ ಅಲ್ಲ, ಇದು ಗುಲಾಮಗಿರಿಯ ಮಾತುಕತೆ" ಎಂದು ಮಂಗಲ್ ತಮ್ಮ ವೀಡಿಯೊದಲ್ಲಿ ಹೇಳಿದ್ದಾರೆ. "ನಾನು ಬೇಡಿಕೊಳ್ಳುತ್ತೇನೆ ಎಂದು ANI ಭಾವಿಸಿದೆ. ನಾನು ತಲೆಬಾಗುವುದಿಲ್ಲ," ಎಂದು ಮಂಗಲ್ ಅವರು ಹೇಳಿದ್ದಾರೆ.

ಅನೇಕ ಕಂಟೆಂಟ್ ಕ್ರಿಯೇಟರ್ ಗಳು ANI ಯ ನೀತಿಯನ್ನು ವಿರೋಧಿಸಿದ್ದಾರೆ. ಈ ಕುರಿತು ವಿಡಿಯೋಗಳನ್ನು ಮಾಡಿರುವ ಅವರು, ANI ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಅವರು ಸಚಿವ ಅಶ್ವಿನಿ ವೈಷ್ಣವ್ ಮತ್ತು ಐ & ಬಿ ಕಾರ್ಯದರ್ಶಿ ಸಂಜಯ್ ಜಾಜು ಅವರಿಗೆ ಈ ಮೇಲ್ ಕಳುಹಿಸಿ, ಘಟನೆಯ ಕುರಿತು ವಿವರಿಸಿದ್ದಾರೆ.

Full View

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News