×
Ad

ಹಿಂಸಾತ್ಮಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ಸ್ವಘೋಷಿತ ಗೋರಕ್ಷಕ ರಾಕಿ ರಾಣಾ : ಪತ್ರಕರ್ತ ಝುಬೈರ್ ಕಳವಳ

Update: 2024-09-03 18:05 IST

Screengrab from the video | X/@zoo_bear

ಹೊಸದಿಲ್ಲಿ : ಸಾಮಾಜಿಕ ಮಾಧ್ಯಮದಲ್ಲಿ ಹಿಂಸಾತ್ಮಕ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುವ ದಿಲ್ಲಿಯ ಸ್ವಘೋಷಿತ ಗೋರಕ್ಷಕ ರಾಕಿ ರಾಣಾ ಬಗ್ಗೆ ಪತ್ರಕರ್ತ ಮುಹಮ್ಮದ್ ಝಬೈರ್ ಕಳವಳ ವ್ಯಕ್ತಪಡಿಸಿದ್ದು, ರಾಣಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಗೋಸಾಗಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿಕೊಳ್ಳುವ ಇಬ್ಬರು ಪುರುಷರನ್ನು ಥಳಿಸುವುದನ್ನು ಕಾಣಬಹುದಾಗಿದೆ.

ಜುಬೈರ್ ಪ್ರಕಾರ, ರಾಣಾ ಅವರ ವಿರುದ್ಧ ಅನೇಕ ಪ್ರಕರಣಗಳಿವೆ. ಆದರೂ ಆತ ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದನ್ನು ಮುಂದುವರಿಸಿದ್ದಾನೆ. ಇದೇ ರೀತಿಯ ದಾಳಿಗಳಿಗೆ ನಿಧಿ ಸಂಗ್ರಹಣೆ ಮಾಡಲು, ರಾಣಾ ಸಾಮಾಜಿಕ ಮಾಧ್ಯಮದಲ್ಲಿ ದೇಣಿಗೆಯನ್ನು ಕೇಳುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಈ ಕುರಿತ ಪೋಸ್ಟನ್ನು ಝಬೈರ್ ದೆಹಲಿ ಪೊಲೀಸರು, ಪೊಲೀಸ್ ಆಯುಕ್ತರು ಮತ್ತು ಇತರ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದು, ರಾಣಾನ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News