×
Ad

ಟಾಯ್ಲೆಟ್‌ನಲ್ಲಿ ಜನಿಸಿದ ಮಗು ಟ್ರಾಕ್‌ ಬಿದ್ದರೂ ಪವಾಡಸದೃಶ ಪಾರು

Update: 2015-12-30 18:36 IST

ಬರೇಲಿ, ಡಿ.30: ಚಲಿಸುತ್ತಿರುವ ರೈಲಿನಲ್ಲಿ ಆಗ ತಾನೆ ಜನಿಸಿದ ಮಗು ಟಾಯ್ಲೆಟ್‌ನ ಗುಂಡಿ ಮೂಲಕ ಟ್ರಾಕ್‌ ಬಿದ್ದರೂ ತರಚಿದ ಗಾಯಗಳೊಂದಿಗೆ ಪವಾಡಸದೃಶವಾಗಿ ಪಾರಾದ ಘಟನೆ ಉತ್ತರ ಪ್ರದೇಶದ ಭೋಜಪುರದಲ್ಲಿ ನಡೆದಿದೆ.
ತನಕಪುರ-ಬರೇಲಿ  ಪ್ಯಾಸೇಂಜರ್‌ ರೈಲಿನ ಟಾಯ್ಲೆಟ್‌ನಲ್ಲಿ ನೇಪಾಲದ ಕಾಂಚನ್‌ಪುರ‍್ ನಿವಾನಿ ಪುಷ್ಪ ಹೆಣ್ಣು ಮಗುವಿಗೆ 
ಜನ್ಮ ನೀಡಿದ್ದರು. ರೈಲಿನಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆ ಟಾಯ್ಲೆಟ್‌ ಪ್ರವೇಶಿಸಿದ್ದಳು. ಹೆರಿಗೆಯ ಬಳಿಕ ಮಗು ಆಕಸ್ಮಿಕವಾಗಿ ಟಾಯ್ಲೆಟ್‌ನ ಗುಂಡಿಯ ಮೂಲಕ ರೈಲು ಟ್ರಾಕ್‌ ಮೇಲೆ ಬಿತ್ತು.


ಮಗು ಟ್ರಾಕ್‌ ಬಿದ್ದ ತಕ್ಷಣ ಮಹಿಳೆ ಸಹಾಯಕ್ಕಾಗಿ ಕೂಗಿಕೊಂಡರೆನ್ನಲಾಗಿದೆ. ಈಕೆಯ ಸಹಾಯಕ್ಕೆ ಧಾವಿಸಿದ ಸಹ ಪ್ರಯಾಣಿಕರು ಚೈನ್‌ ಎಳೆದು ರೈಲನ್ನು ನಿಲ್ಲಿಸಿದರು. ತಕ್ಷಣ ರೈಲು ಚಾಲಕ ಸಮೀಪದ ಸ್ಟೇಷನ್‌ ಮಾಸ್ಟರ್‌ಗೆ ಮಾಹಿತಿ ನೀಡಿದರು. ಟ್ರಾಕ್‌ ಮೇಲೆ ಬಿದ್ದ ಮಗುವಿಗೆ ತರಚಿದ ಗಾಯವಾಗಿದೆ. ತಾಯಿ ಮತ್ತು ಮಗುವನ್ನು ಸ್ಥಳೀಯ ಆಸ್ಪತ್ರೆಗೆ  ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News