×
Ad

ಬರಾಕ್-8 ಯಶಸ್ವಿ

Update: 2015-12-31 17:44 IST

ಮುಂಬೈ, ಡಿ.30: ಭಾರತೀಯ ನೌಕಾಪಡೆಯು ದೂರಸಾಮರ್ಥ್ಯದ, ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಬರಾಕ್-8 ಕ್ಷಿಪಣಿಯನ್ನು ಐಎನ್‌ಎಸ್ ಕೋಲ್ಕತಾದಿಂದ ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸುವ ಮೂಲಕ ವಾಯುಸುರಕ್ಷಾ ಸಾಮರ್ಥ್ಯದಲ್ಲಿ ಗಣನೀಯ ಸಾಧನೆ ಮಾಡಿದಂತಾಗಿದೆ.


 ಅತಿವೇಗದ ಚಲನೆಯ ಎರಡು ಗುರಿಗಳನ್ನು ಕೇಂದ್ರೀಕರಿಸಿ, ಮಂಗಳವಾರ ಹಾಗೂ ಬುಧವಾರ ಅರಬ್ಬಿ ಸಮುದ್ರದಲ್ಲಿ ನಡೆದ ನೌಕಾ ಕಾರ್ಯಾಚರಣೆಯಲ್ಲಿ ಎರಡು ಕ್ಷಿಪಣಿಗಳನ್ನು ಪ್ರಯೋಗಿಸಲಾಯಿತು ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಪ್ರಕಟಿಸಿದ್ದಾರೆ.


ಇದು ಭಾರತೀಯ ನೌಕಾಪಡೆ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದು ಅವರು ಬಣ್ಣಿಸಿದ್ದಾರೆ. ಭಾರತ ಹಾಗೂ ಇಸ್ರೇಲ್ ಜಂಟಿ ಸಹಭಾಗಿತ್ವದಲ್ಲಿ ಬರಾಕ್-8 ಕ್ಷಿಪಣಿ ಅಭಿವೃದ್ಧಿಪಡಿಸಿದ್ದವು. ಇಸ್ರೇಲಿ ಹಡಗುಗಳಿಂದ ಎರಡು ಪರೀಕ್ಷೆಗಳನ್ನು ಈ ಮೊದಲೇ ಯಶಸ್ವಿಯಾಗಿ ನಿರ್ವಹಿಸಲಾಗಿತ್ತು. ಭಾರತೀಯ ಹಡಗಿನಿಂದ ಪರೀಕ್ಷೆ ನಡೆಸಿರುವುದು ಇದೇ ಮೊದಲು.
ನಿಗದಿತ ವಿಮಾನ, ಹೆಲಿಕಾಪ್ಟರ್, ಡ್ರೋಣ್ ಅಥವಾ ಪ್ರಾಜೆಕ್ಟಿಲೈಸ್‌ಗಳಿಂದ ಎದುರಾಗ ಬಹುದಾದ ವಾಯುಪ್ರದೇಶದ ಅಪಾಯಗಳಿಂದ ಸುರಕ್ಷೆ ಒದಗಿಸುವ ಸಲುವಾಗಿ ಬರಾಕ್-8 ಕ್ಷಿಪಣಿ ಅಭಿವೃದ್ಧಿಪಡಿಸಲಾಗಿದೆ. ಎಐಎ, ಡಿಆರ್‌ಡಿಓ ಹಾಗೂ ಇಸ್ರೇಲಿನ ಎಲ್ತಾ ಸಿಸ್ಟಂ, ರಫೀಲ್ ಹಾಗೂ ಇತರ ಕಂಪೆನಿಗಳು ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News