ದಿಲ್ಲಿ ಸರಕಾರಕ್ಕೆ ಕೇಂದ್ರ ಸರಕಾರದ ಟಾಂಗ್; ಅಧಿಕಾರಿಗಳ ಅಮಾನತು ಆದೇಶ ರದ್ದು

Update: 2015-12-31 12:28 GMT


ಹೊಸದಿಲ್ಲಿ, ಡಿ.31: ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ವೇತನ ಏರಿಕೆಗೆ ಸಂಬಂಧಿಸಿದ  ಕಡತಕ್ಕೆ ಸಹಿ ಹಾಕಲು ನಿರಾಕರಿಸಿದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದ ದಿಲ್ಲಿ ಸರಕಾರದ ಆದೇಶವನ್ನು ಕೆಂದ್ರ ಸರಕಾರ ರದ್ದುಪಡಿಸಿದೆ.


 ಇತ್ತೀಚೆಗೆ ಸಚಿವ ಸಂಪುಟದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ವೇತನ ಏರಿಕೆಯ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಕಡತಕ್ಕೆ ಸಹಿ ಹಾಕಲು ಆಧಿಕಾರಿಗಳು ನಿರಾಕರಿಸಿದರೆನ್ನಲಾಗಿದೆ. ಈ ಕಾರಣಕ್ಕಾಗಿ ಸರಕಾರ ಇಬ್ಬರು ಅಧಿಕಾರಿಗಳನ್ನು ಸರಕಾರ ಬುಧವಾರ ಅಮಾನತುಗೊಳಿಸಿತ್ತು.


ಅಧಿಕಾರಿಗಳನ್ನು ಅಮಾನತುಗೊಳಿಸಿದ ಸರಕಾರದ ಆದೇಶದ ವಿರುದ್ಧ ಸಹೋದ್ಯೋಗಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. 200 ಮಂದಿ ಅಧಿಕಾರಿಗಳು ಹಾಗು ಸಿಬ್ಬಿಂದಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುವ ಬೆದರಿಕೆಯೊಡ್ಡಿದ್ದರು. ಕೇಂದ್ರ ಸರಕಾರದ ಮಧ್ಯಪ್ರವೇಶದ ಪರಿಣಾಮವಾಗಿ  ಅಮಾನತು ಆದೇಶ 24 ಗಂಟೆಗಳ ಒಳಗಾಗಿ ರದ್ದಾಗಿದೆ. ದಿಲ್ಲಿ ಸರಕಾರ ಮತ್ತು ಕೇಂದ್ರ ಸರಕಾರ ,  ಅಧಿಕಾರಿಗಳು ಮತ್ತು ದಿಲ್ಲಿ ಸರಕಾರದ ನಡುವೆ ಸಂಘರ್ಷ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News