ಜನಬೆಂಬಲ ಮತವಾಗಿ ಪರಿವರ್ತನೆಗೊಳ್ಳಲಿಲ್ಲ: ಜೆ.ಪಿ.ಹೆಗ್ಡೆ

Update: 2015-12-31 18:40 GMT

ಉಡುಪಿ, ಡಿ.31: ಚುನಾವಣೆಗೆ ನಿಲ್ಲುವ ಸಂದರ್ಭದಲ್ಲಿ ಪ್ರಚಾರದ ವೇಳೆ ತನಗೆ ಸಿಕ್ಕಿದ ಬೆಂಬಲ, ಮತವಾಗಿ ಪರಿವರ್ತನೆ ಗೊಳ್ಳದಿರುವುದರಿಂದ ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ತನಗೆ ಸೋಲಾಗಿದೆ.

ಇದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ಅನುಸರಿಸಿದ ಬೆದರಿಕೆ, ಒತ್ತಡ ಹಾಗೂ ಮತಗಳಿಗೆ ‘ವೌಲ್ಯ’ ನಿರ್ಧರಿಸಿರುವುದು ಕಾರಣವಾಗಿದೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ತನ್ನ ಬಗ್ಗೆ ಮತದಾರರಿಗಿದ್ದ ಒಳ್ಳೆಯ ಅಭಿ ಪ್ರಾಯ ಮತವಾಗಿ ಪರಿವರ್ತನೆಯಾಗಲಿಲ್ಲ ಎಂದರು. ಆದರೆ ತನಗೆ ಸಿಕ್ಕಿದ ಮತಗಳಿಂದ ತೃಪ್ತಿ ಇದೆ. ಸ್ವತಂತ್ರ ಅಭ್ಯರ್ಥಿ ಯಾಗಿ ನಿಂತು ರಾಷ್ಟ್ರೀಯ ಪಕ್ಷಗಳಿಂದ 800ಕ್ಕೂ ಅಧಿಕ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.

ಮತದಾರರಿಗೆ ಗೌರವ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ತನ್ನ ಸ್ಪರ್ಧೆಯಿಂದ ಮತದಾರರಿಗೂ ‘ಗೌರವ’ ಸಿಗುವಂತಾಗಿದೆ. ಈವರೆಗೆ ಮತ ದಾರರ, ಕಾರ್ಯಕರ್ತರ ಮನೆ ಬಾಗಿಲಿಗೆ ಬಾರದ ಸಚಿವರು, ಶಾಸಕರು, ಜನಪ್ರತಿನಿಧಿಗಳೆಲ್ಲರೂ ಪ್ರತಿಯೊಬ್ಬ ಮತದಾರನ ಮನೆಹೊಸ್ತಿಲು ತುಳಿಯುವಂತಾಯಿತು ಎಂದು ಹೆಗ್ಡೆ ವ್ಯಂಗ್ಯ ವಾಡಿದರು.

ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಉಚ್ಛಾಟಿತರಾಗಿರುವ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಹಾಗೂ ಹರೀಶ್‌ಕುಮಾರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News