ಜೀಪು ಚಾಲಕ ಮಾಲಕರ ಸಂಘ ಉದ್ಘಾಟನೆ

Update: 2016-01-01 18:05 GMT

ಕಡಬ, ಜ.1: ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಯಾವುದೇ ಕಾರ್ಯವನ್ನು ಸಮರ್ಪಕವಾಗಿ ಮಾಡಲು ಸಾಧ್ಯ ಎಂದು ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್‌ನ ಅಧ್ಯಕ್ಷ ಮೋನಪ್ಪಭಂಡಾರಿ ಹೇಳಿದರು. ಮಂಗಳೂರಿನ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್‌ನ ಅಂಗಸಂಸ್ಥೆಯಾದ ಕಡಬ ವಲಯದ ‘ಸಂಗಮ’ ಜೀಪು ಚಾಲಕ ಮಾಲಕರ ಸಂಘದ ಪದಗ್ರಹಣ ಸಮಾರಂಭವನ್ನು ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವಿಶೇಷ ತಹಶೀಲ್ದಾರ್ ಬಿ.ಲಿಂಗ ಯ್ಯ, ಎಎಸ್ಸೈ ಉಪನಿರೀಕ್ಷಕ ಚಂದಪ್ಪಮಾತನಾಡಿದರು. ಕಡಬ ವಲಯದ ಸಂಗಮ ಜೀಪು ಚಾಲಕ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಬಾಬು ಮುಗೇರ ಹಾಗೂ ಸಂಘದ ಗೌರವಾಧ್ಯಕ್ಷ ಹರೀಶ್ ನಾಯಕ್ ಅಗ್ರಶಾಲೆ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಆನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಸೋಸಿಯೇಶನ್‌ನ ಸುಬ್ರಹ್ಮಣ್ಯ ವಲಯದ ಅಧ್ಯಕ್ಷ ಹಿಮಕರ ಸ್ವಾಗತಿಸಿದರು. ಹಾರಿಸ್ ಕಳಾರ ವಂದಿಸಿದರು. ಕಡಬ ಜೇಸಿಐ ಪೂರ್ವಾಧ್ಯಕ್ಷ ಮಂಜುನಾಥ ಮರ್ದಾಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News