ಕತರ್ ಓಪನ್: ಜೊಕೊವಿಕ್ ಪ್ರಧಾನ ಆಕರ್ಷಣೆ

Update: 2016-01-02 18:12 GMT

ದೋಹಾ, ಜ.2: ಟೆನಿಸ್ ಚರಿತ್ರೆಯ ಇತಿಹಾಸದಲ್ಲಿ ಶ್ರೇಷ್ಠ ವರ್ಷವೊಂದನ್ನು ಪೂರೈಸಿದ ಆರು ವಾರಗಳ ನಂತರ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಕತರ್ ಓಪನ್ ಟೂರ್ನಿಯನ್ನು ಆಡುವ ಮೂಲಕ 2016ನೆ ಋತುವನ್ನು ಆರಂಭಿಸಲಿದ್ದಾರೆ.

ಕತರ್ ಓಪನ್ ಟೂರ್ನಿಯು ಜೊಕೊವಿಕ್‌ಗೆ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯ ಓಪನ್ ತಯಾರಿಗೆ ಉತ್ತಮ ವೇದಿಕೆಯಾಗಲಿದೆ. ಸರ್ಬಿಯದ ಜೊಕೊವಿಕ್ 2015ರ ಋತುವಿನಲ್ಲಿ ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ಹಾಗೂ ಅಮೆರಿಕನ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದು ಸೋಮವಾರ ಆರಂಭವಾಗಲಿರುವ ಕತರ್ ಓಪನ್‌ನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ. ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಡೇವಿಡ್ ಫೆರರ್, ಸ್ಪೇನ್‌ನ ರಫೆಲ್ ನಡಾಲ್ ಹಾಗೂ ಥಾಮಸ್ ಬೆರ್ಡಿಕ್ ಆಡಲಿದ್ದಾರೆ.

2015ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ 28ರ ಹರೆಯದ ಜೊಕೊವಿಕ್ ಮೂರು ಗ್ರಾನ್‌ಸ್ಲಾಮ್ ಪ್ರಶಸ್ತಿ ಸೇರಿದಂತೆ ಸತತ 15 ಟೂರ್ ಫೈನಲ್ಸ್‌ನಲ್ಲಿ ಆಡಿದ್ದರು. 21 ಮಿಲಿಯನ್ ಡಾಲರ್‌ಗೂ ಅಧಿಕ (19 ಮಿಲಿಯನ್ ಯುರೋಸ್) ಬಹುಮಾನ ಮೊತ್ತವನ್ನು ಸಂಪಾದಿಸಿದ್ದರು.

ಎಲ್ಲ ನಾಲ್ಕೂ ಗ್ರಾನ್‌ಸ್ಲಾಮ್ ಟೂರ್ನಿಯ ಫೈನಲ್‌ಗೆ ತಲುಪಿದ್ದ ಮೂರನೆ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದ ಜೊಕೊವಿಕ್ ಫ್ರೆಂಚ್ ಓಪನ್‌ನಲ್ಲಿ ಮಾತ್ರ ಸ್ಟಾನ್ ವಾವ್ರಿಂಕ ವಿರುದ್ಧ ಶರಣಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News