Messi ತೆರಳಿದರೂ ಮುಗಿಯದ ಗದ್ದಲ; ಗಂಗುಲಿಯಿಂದ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ
Update: 2025-12-18 21:48 IST
ಸೌರವ್ ಗಂಗುಲಿ | Photo Credit : PTI
ಕೋಲ್ಕತಾ, ಡಿ. 18: ಕೋಲ್ಕತಾದ ಅರ್ಜೆಂಟೀನ ಫ್ಯಾನ್ ಕ್ಲಬ್ ಅಧ್ಯಕ್ಷ ಉತ್ತಮ್ ಸಾಹ ವಿರುದ್ಧ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಅರ್ಜೆಂಟೀನ ಫುಟ್ಬಾಲ್ ತಂಡದ ಸೂಪರ್ ಸ್ಟಾರ್ ಲಿಯೊನೆಲ್ ಮೆಸ್ಸಿ ಶನಿವಾರ ಕೋಲ್ಕತದ ಯುವ ಭಾರತಿ ಸ್ಟೇಡಿಯಮ್ ಗೆ ಭೇಟಿ ನೀಡಿದ್ದಾಗ ನಡೆದ ನೂಕುನುಗ್ಗಲಿಗೆ ಸೌರವ್ ಗಂಗುಲಿ ಕಾರಣ ಎಂಬುದಾಗಿ ಆರೋಪಿಸಿದ್ದರು.
ಸಾಹಾ ಅವರ ಸಾರ್ವಜನಿಕ ಹೇಳಿಕೆಗಳು ಆಧಾರರಹಿತ ಹಾಗೂ ಅವುಗಳು ಗಂಗುಲಿಯ ಪ್ರತಿಷ್ಠೆಗೆ ಗಂಭೀರ ಹಾನಿ ಮಾಡಿವೆ ಎಂಬುದಾಗಿ ಲಾಲ್ ಬಝಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ಆರೋಪಿಸಲಾಗಿದೆ.