ಹಿರಿಯ ಕಮ್ಯೂನಿಸ್ಟ್ ನಾಯಕ ಬರ್ಧನ್ ನಿಧನ

Update: 2016-01-02 18:16 GMT

ಹೊಸದಿಲ್ಲಿ,ಜ.2: ಹಿರಿಯ ಕಮ್ಯೂನಿಸ್ಟ್ ನಾಯಕ ಎ.ಬಿ. ಬರ್ಧನ್ ಅವರು ಶನಿವಾರ ಇಲ್ಲಿಯ ಜಿ.ಬಿ.ಪಂತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಪಾರ್ಶ್ವವಾಯು ಪೀಡಿತರಾಗಿದ್ದ ಬರ್ಧನ್‌ರನ್ನು ಡಿ.7ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಚಿಂತಾಜನಕವಾಗಿಯೇ ಮುಂದುವರಿದಿದ್ದು, ಶನಿವಾರ ರಾತ್ರಿ 8.13ಕ್ಕೆ ನಿಧನರಾದರು.

1924,ಸೆ.24ರಂದು ಜನಿಸಿದ್ದ ಬರ್ಧನ್ ಮಹಾರಾಷ್ಟ್ರದ ಪ್ರಭಾವಿ ಟ್ರೇಡ್ ಯೂನಿಯನ್ ನಾಯಕರಾಗಿದ್ದರು. ಅವರು ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News