ಬಾಲಾಪರಾಧಿಗೆ ಶಿಕ್ಷೆಯಾಗುವುದಿಲ್ಲವೇ?

Update: 2016-01-03 15:28 GMT


ದೆಹಲಿಯಲ್ಲಿ ನಡೆದ ನಿರ್ಭಯಾ(ಜ್ಯೋತಿ ಸಿಂಗ್) ಅತ್ಯಾಚಾರ ಪ್ರಕರಣದ ಬಾಲಾಪರಾಧಿಗೆ ಬೇಲ್ ಸಿಕ್ಕಿರುವುದನ್ನು ಖಂಡಿಸಿ ದೆಹಲಿ ಮಹಿಳಾ ಆಯೋಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಇಂತಹ ಪ್ರಕರಣಗಳು ಅಪರೂಪವಾಗಿದ್ದು, ಕಾನೂನಿನಡಿಯಲ್ಲಿ ಬಾಲಾಪರಾಧಿಯನ್ನು ಶಿಕ್ಷೆಗೆ ಗುರಿಪಡಿಸುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು.


            ಇದಕ್ಕೆ ಪ್ರತಿಯಾಗಿ ನಿರಂತರ ಪ್ರತಿಭಟಿಸಿದ ನಿರ್ಭಯಾ ಪೋಷಕರು ಹಾಗೂ ದೇಶವ್ಯಾಪಿ ಕೇಳಿಬಂದ ಸಾರ್ವಜನಿಕರ ಒತ್ತಾಯದಿಂದ ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಲಾಯಿತು. ಇದರ ಪ್ರಕಾರ ಹೀನ ಕೃತ್ಯಗಳಲ್ಲಿ ಭಾಗಿಯಾದ 16 ವರ್ಷದಿಂದ 18 ವರ್ಷದೊಳಗಿನ ಮಕ್ಕಳನ್ನು ವಯಸ್ಕರೆಂದು ಪರಿಗಣಿಸಿ ವಿಚಾರಣೆ ನಡೆಸುವ ಬಾಲಾಪರಾಧಿ ನ್ಯಾಯ ಮಸೂದೆಯನ್ನು ಸಂಸೇತ್ತೇನು ಅಂಗೀಕರಿಸಿದೆ. ಆದರೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಬಾಲಾಪರಾಧಿಗೆ ಶಿಕ್ಷೆಯಾಗುವುದಿಲ್ಲ. ಮುಂದಿನ ಬಾಲಾಪರಾಧಿಯನ್ನು ಶಿಕ್ಷೆಗೆ ಗುರಿಪಡಿಸಲು ಕಾಯುವುದಕ್ಕಿಂತ, ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಬಾಲಾಪರಾಧಿಯನ್ನು ಶಿಕ್ಷೆಗೆ ಗುರಿಪಡಿಸಬೇಕು. ಇದರಿಂದ ಹೀನ ಕೃತ್ಯಗಳಲ್ಲಿ ಮಕ್ಕಳು ಭಾಗಿಯಾಗುವುದನ್ನು ತಡೆಗಟ್ಟಬಹುದು.
 

Writer - ರಫೀಕ್ ಚೆಂಗಳ

contributor

Editor - ರಫೀಕ್ ಚೆಂಗಳ

contributor

Similar News