ಮಾ.1ರಿಂದ ಸಿಬಿಎಸ್‌ಇ ಪರೀಕ್ಷೆ
Update: 2016-01-03 23:55 IST
ಹೊಸದಿಲ್ಲಿ, ಜ.3: ಸಿಬಿಎಸ್‌ಇ 10 ಮತ್ತು 12ನೆ ತರಗತಿಗೆ ಪರೀಕ್ಷಾ ವೇಳಾಪಟ್ಟಿ ಘೋಷಿಸಿದೆ. ಎರಡೂ ಪರೀಕ್ಷೆಗಳು ಮಾರ್ಚ್ 1ರಂದು ಆರಂಭವಾಗಲಿವೆ.
ಹನ್ನೆರಡನೆ ತರಗತಿಗೆ ಮೊದಲು ಇಂಗ್ಲಿಷ್ ವಿಷಯವನ್ನು ನಿಗದಿಪಡಿಸಲಾಗಿದ್ದು, ಹತ್ತನೆ ತರಗತಿಗೆ ಡೈನಾಮಿಕ್ ರಿಟೇಲ್, ಇನ್‌ಫಾರ್ಮೇಶನ್ ಟೆಕ್ನಾಲಜಿ, ಸೆಕ್ಯೂರಿಟಿ, ಆಟೋ ಟೆಕ್ನಾಲಜಿ ಮತ್ತು ಇಂಟರ್‌ನ್ಯಾಶನಲ್ ಟೂರಿಸ್‌ಂ ವಿಷಯಗಳು ಮೊದಲ ಪರೀಕ್ಷಾ ವಿಷಯಗಳಾಗಿವೆ. ಸೈನ್ಸ್ ಥಿಯರಿ ಮತ್ತು ಪ್ರಾಯೋಗಿಕ ಪರೀಕ್ಷೆಗಳೊಂದಿಗೆ ಮುಖ್ಯವಿಷಯಗಳ ಪರೀಕ್ಷೆಗಳು ಮಾರ್ಚ್ 2ರಿಂದ ಆರಂಭವಾಗಲಿವೆ.