×
Ad

ಊಟಕ್ಕಿಲ್ಲದ ಉಪ್ಪಿನಕಾಯಿ ಮಾಣಿಯ ಎಟಿಎಂ

Update: 2016-01-04 17:27 IST

ಮಾಣಿ : ಇಲ್ಲಿನ ಪುತ್ತೂರು ರಸ್ತೆಯಲ್ಲಿ ವಿಜಯಾಬ್ಯಾಂಕ್ ಎಟಿಎಂ ಸ್ಥಾಪನೆಯಾದಾಗ ಗ್ರಾಮೀಣ ಪ್ರದೇಶವಾದ ಮಾಣಿ ಸುತ್ತಮುತ್ತಲಿನ ಜನರಿಗೆ ಬಹಳ ಅನುಕೂಲವಾಗಿತ್ತು ಆದರೆ ಆರಂಭದಿಂದಲೇ ಗ್ರಹಚಾರ ಬಡಿದಿರುವ ಈ ಎಟಿಎಂ ಸರಿ ಇದ್ದ ದಿನಕ್ಕಿಂತ ಹೆಚ್ಚು ಕೆಟ್ಟು ಹೋಗಿರುವುದೇ ಹೆಚ್ಚು ಎಟಿಎಂನಿಂದ ಅರ್ಜೆಂಟ್ ಕೆಲಸ ಕಾರ್ಯಗಳಿಗೆ ಹಣ ತೆಗೆಯಲು ಬರುವವರು ಶಾಪ ಹಾಕಿ ಹೋಗುತ್ತಾರೆ ಒಂದು ದಿನ ಸರಿಯಾಗಿ ಕಾರ್ಯನಿರ್ವಹಿಸಿದರೆ ಒಂದು ವಾರ ಅಥವಾ ಒಂದು ತಿಂಗಳು ಸರಿ ಇರುವುದಿಲ್ಲ ಮಾಣಿಯಲ್ಲಿ ವಿಜಯಾಬ್ಯಾಂಕ್ ನ ಶಾಖೆಯೂ ಇದ್ದು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಸ್ಥಿರ ಸ್ಪಂದನೆಯು ಲಭಿಸಿರುವುದಿಲ್ಲ ಕಳಪೆ ಗುಣಮಟ್ಟದ ಎಟಿಎಂ ಮಷೀನ್ ಇಲ್ಲಿ ಸ್ಥಾಪಿಸಿರುವುದರಿಂದ ಈ ರೀತಿ ಪದೇ ಪದೇ ಕೆಟ್ಟುಹೋಗಿ ಗ್ರಾಹಕರ ಸೇವೆಗೆ ಲಭ್ಯವಿರುವುದಿಲ್ಲವಾದ್ದರಿಂದ ಇದಕ್ಕೆ ಶಾಶ್ವತ ಪರಿಹಾರ ಸಿಗಬೇಕಾದರೆ ಉತ್ತಮ ಗುಣಮಟ್ಟದ ಬೇರೆ  ಮಷೀನ್ ಸ್ಥಾಪಿಸಬೇಕಾದ ಅನಿವಾರ್ಯತೆ ಖಂಡಿತಾ ಇದೆ ವಿಜಯಾಬ್ಯಾಂಕ್ ಆ ಮೂಲಕ ಸ್ಪಂದಿಸಬೇಕಾಗಿದೆ ಎಂಬುವುದು ಮಾಣಿ ಪರಿಸರದ ಜನರ ಬೇಡಿಕೆಯಾಗಿದೆ.

Writer - ಸಲೀಂ , ಮಾಣಿ

contributor

Editor - ಸಲೀಂ , ಮಾಣಿ

contributor

Similar News