ಲಡಾಖ್‌ನಲ್ಲಿ ಭಾರೀ ಹಿಮಪಾತಕ್ಕೆ ಸಿಲುಕಿ ನಾಲ್ವರು ಸೈನಿಕರ ಸಾವು

Update: 2016-01-04 12:31 GMT


ಜಮ್ಮು, ಜ.4: ಜಮ್ಮು ಮತ್ತು ಕಾಶ್ಮೀರದ ಲಡಾಖ್‌ನಲ್ಲಿ ಸಂಭವಿಸಿದ ಭಾರೀ ಹಿಮಾಪಾತಕ್ಕೆ ಸಿಲುಕಿ ಭಾರತದ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ.
3 ಲಡಾಖ್‌  ಸ್ಕೌಟ್‌ನ ನಾಲ್ವರು ಯೋಧರು ರವಿವಾರ ಸಂಜೆ ಲಡಾಖ್‌ನ ದಕ್ಷಿಣ ಗ್ಲೇಸಿಯರ್‌ನಲ್ಲಿ ಸಂಭವಿಸಿದ ಹಿಮಪಾತಕ್ಕೆ ಸಿಲುಕಿ ಮೃತಪಟ್ಟಿರುವುದಾಗಿ ಉಧಂಪುರ ಮೂಲದ ಸೇನಾ  ವಕ್ತಾರ ಕರ್ನಲ್‌ ಎಸ್‌.ಡಿ.ಗೋಸ್ವಾಮಿ ತಿಳಿಸಿದ್ಧಾರೆ.
ಹವಾಲ್ದಾರ‍್ ಸೆವಾಂಗ್‌ ನುರಾಬು, ಹವಾಲ್ದಾರ್‌ ದೊರ್ಜೆಯ್‌ ಗ್ಯಾಲ್‌ಸ್ಟಾನ್‌, ರೈಫಲ್‌ಮೆನ್ ಮುಹಮ್ಮದ್‌ ಯೂಸುಫ್‌ ಮತ್ತು ರೈಫಲ್‌ಮೆನ್‌ ಜಿಗ್‌ಮೈಡ್‌ ಚೋಸ್‌ಡುಪ್‌  ಎಂಬವರು ಹಠಾತ್ತನೆ ಸಂಭವಿಸಿದ ಹಿಮಪಾತಕ್ಕೆ ಸಿಲುಕಿ ಮೃತಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News