ಪಟಾಣ್‌ಕೋಟ್‌ನಲ್ಲಿ 77 ಗಂಟೆ ದಾಟಿದ ಕಾರ್ಯಾಚರಣೆ
Update: 2016-01-05 11:37 IST
ಪಂಜಾಬ್, ಜ.5: ಪಟಾಣ್‌ಕೋಟ್‌ನಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಗೊಂಡು 77ಗಂಟೆ ಕಳೆದಿದ್ದರೂ ಭದ್ರತಾ ಪಡೆ ಇನ್ನೂ ಕಾರ್ಯಾಚರಣೆಯನ್ನು ನಿಲ್ಲಿಸಿಲ್ಲ.
ಎಷ್ಷು ಉಗ್ರರು ಪಟಾಣ್‌ಕೋಟೆ ವಾಯುನೆಲೆ ಪ್ರವೇಶಿಸಿದ್ದಾರೆ ಎಂಬ ವಿಚಾರದ ಬಗ್ಗೆ ಮಾಹಿತಿ ಇಲ್ಲ. ಇದು ಸಮಸ್ಯೆಗೆ ಕಾರಣವಾಗಿದೆ. ಈಗಾಗಲೇ ಐವರು ಉಗ್ರರನ್ನು ಕೊಲ್ಲಲಾಗಿದೆ. ಆರಂಭದಲ್ಲಿ ಐವರು ಉಗ್ರರು ವಾಯುನೆಲೆ ಪ್ರವೇಶಿಸಿದ್ದಾರೆಂದು ಹೇಳಲಾಗಿತ್ತು. ಇವರನ್ನು ಸದೆ ಬಡಿಯಲಾಗಿದ್ದರೂ, ಇನ್ನೂ ವಾಯುನೆಲೆಯಲ್ಲಿ ಉಗ್ರರು ಅವಿತುಕೊಂಡಿದ್ದಾರೆ ಎಂಬ ಶಂಕೆ ಮೂಡಿದೆ.
ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ಗುಂಡಿನ ಸದ್ದು ಕೇಳಿ ಬಂದಿದೆ. ಈ ಕಾರಣದಿಂದಾಗಿ ಇನ್ನೂ ಉಗ್ರರು ವಾಯುನೆಲೆಯಲ್ಲಿ ಅವಿತಿರುವ ಸಾಧ್ಯತೆ ಕಂಡು ಬಂದಿದೆ.