×
Ad

ಅಕ್ರಮ ವಲಸಿಗರ ಗಡಿಪಾರಿಗೆ ಚಾಲನೆ

Update: 2016-01-06 00:28 IST

ವಾಷಿಂಗ್ಟನ್, ಜ.5: ಅಕ್ರಮವಾಗಿ ರಾಷ್ಟ್ರವನ್ನು ಪ್ರವೇಶಿಸಿರುವ ಹಾಗೂ ಕಾನೂನು ಸಮ್ಮತ ಆಶ್ರಯವನ್ನು ಪಡೆಯದಿರುವ ವಿದೇಶಿ ವಲಸಿಗರ ಬಂಧನ ಹಾಗೂ ಗಡಿಪಾರು ಕಾರ್ಯಾಚರಣೆಯನ್ನು ಅಮೆರಿಕ ಪ್ರಾರಂಭಿಸಿದೆ.

ಈ ಕಾರ್ಯಾಚರಣೆಯಲ್ಲಿ ಉಂಟಾಗಿರುವ ಪ್ರಗತಿಯ ಬಗ್ಗೆ ಮಂಗಳವಾರ ಅಮೆರಿಕದ ಆಂತರಿಕ ಭದ್ರತಾ ಸಚಿವಾಲಯದ ಕಾರ್ಯದರ್ಶಿ ಜೆಹ್ ಜಾನ್ಸನ್ ಖಚಿತಪಡಿಸಿದ್ದಾರೆ.

ಅಕ್ರಮವಾಗಿ ರಾಷ್ಟ್ರವನ್ನು ಪ್ರವೇಶಿಸಿರುವ ಮಕ್ಕಳು ಹಾಗೂ ಹಿರಿಯರನ್ನು ವಲಸೆ ಹಾಗೂ ಸೀಮಾಸುಂಕ ಜಾರಿ ಇಲಾಖೆಗಳು ವಶಕ್ಕೆ ತೆಗೆದುಕೊಳ್ಳುವ ಕಾರ್ಯಾಚರಣೆಯನ್ನು ಕಳೆದ ವಾರದಿಂದ ಪ್ರಾರಂಭಿಸಿರುವುದಾಗಿ ಅವರು ತಿಳಿಸಿದ್ದಾರೆ.

ಬಂಧಿತರಲ್ಲಿ ಹೆಚ್ಚಿನವರು ದಕ್ಷಿಣದ ಗಡಿಯ ಮೂಲಕ ಅಮೆರಿಕವನ್ನು ಪ್ರವೇಶಿಸಿದವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

ಕೆಲವು ಅಂದಾಜುಗಳ ಪ್ರಕಾರ ಪ್ರಸಕ್ತ ಅಮೆರಿಕದಲ್ಲಿ ಸುಮಾರು 11 ದಶಲಕ್ಷ ಅಕ್ರಮ ವಲಸಿಗರು ನೆಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News