ಚೋಟಾ ರಾಜನ್ ವಿರುದ್ಧದ ಎಫ್‌ಐಆರ್ ಬಹಿರಂಗಗೊಳಿಸಲು ಸಿಬಿಐ ನಕಾರ
ಹೊಸದಿಲ್ಲಿ,ಜ.5: ನಕಲಿ ದಾಖಲೆಗಳನ್ನು ಸಲ್ಲಿಸಿ ಭ್ರಷ್ಟ ಮಾರ್ಗದ ಮೂಲಕ ಪಾಸ್‌ಪೋರ್ಟ್ ಪಡೆದುಕೊಂಡಿರುವ ಆರೋಪದಲ್ಲಿ ಪಾತಕಿ ಚೋಟಾ ರಾಜನ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ್ನು ಬಹಿರಂಗಗೊಳಿಸಲು ಸಿಬಿಐ ನಿರಾಕರಿಸಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ತನಗೆ ವಿನಾಯಿತಿ ಇದೆ ಎಂದು ಅದು ಹೇಳಿದೆ.
ಆದರೆ,ಕೋರಲಾದ ಮಾಹಿತಿಗಳು ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದಾಗಿದ್ದರೆ ವಿನಾಯಿತಿ ಹೊಂದಿರುವ ಸಂಸ್ಥೆಗಳೂ ಆರ್‌ಟಿಐ ವ್ಯಾಪ್ತಿಗೆ ಬರುತ್ತವೆ ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಆರೋಪವು ಒಂದು ಪ್ರಾಧಿಕಾರ,ಅದರ ಸಿಬ್ಬಂದಿ ವಿರುದ್ಧವೇ ಅಥವಾ ಅಲ್ಲವೇ ಎನ್ನುವುದು ಇಲ್ಲಿ ಗೌಣವಾಗಿದೆ. ಕಾಯ್ದೆಯಂತೆ ಪ್ರಾಧಿಕಾರವು ತನ್ನ ಬಳಿ ಆ ಮಾಹಿತಿಯನ್ನು ಹೊಂದಿದೆಯೇ ಎನ್ನುವುದು ಮುಖ್ಯವಾಗಿದೆ.
ಆದರೆ,ಆರ್‌ಟಿಐ ಕಾಯ್ದೆಯ ವ್ಯಾಪ್ತಿಯಿಂದ ವಿನಾಯಿತಿ ಪಡೆದಿರುವ ಸಿಬಿಐ ಅರ್ಜಿದಾರರು ಕೋರಿದ್ದ ಮಾಹಿತಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದರೂ ಮಾಹಿತಿ ನೀಡಿಕೆಗೆ ನಿರಾಕರಿಸಲು ಕಾಯ್ದೆಯ ಕಲಂ 24ನ್ನು ಉಲ್ಲೇಖಿಸುತ್ತಿದೆ. ಕಾಯ್ದೆಯಿಂದ ವಿನಾಯಿತಿ ಹೊಂದಿರುವ ಸಂಸ್ಥೆಗಳೂ ಭ್ರಷ್ಟಾಚಾರದ ಆರೋಪಗಳ ಕುರಿತು ಮಾಹಿತಿಗಳನ್ನು ಒದಗಿಸಲೇಬೇಕು ಎಂದು ಕಲಂ 24ರಡಿ ನಿಬಂಧನೆಯು ಸ್ಪಷ್ಟಪಡಿಸಿದೆ ಎಂದು ನಾಯಕ್ ಬೆಟ್ಟು ಮಾಡಿದ್ದಾರೆ.