"ಹೋಮಿಯೋಪತಿ ಬೋಗಸ್ , ಆಸ್ಟ್ರಾಲಾಜಿ ಹಾರ್ಮ್‌ಫುಲ್ : ನೊಬೆಲ್ ಪ್ರಶಸ್ತಿ ವಿಜೇತ ವೆಂಕಟ್ರಾಮನ್
Update: 2016-01-06 12:22 IST
ಚಂಡಿಗಢ, ಜ.6: "ಹೋಮಿಯೋಪತಿ ಬೋಗಸ್ , ಆಸ್ಟ್ರಾಲಾಜಿ ಹಾರ್ಮ್‌ಫುಲ್ :" ಹೀಗೆಂದವರು ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತ ಮೂಲದ ವಿಜ್ಞಾನಿ ವೆಂಕಟ್ರಾಮನ್ ರಾಮಕೃಷ್ಣ ಮೈಸೂರಿನಲ್ಲಿ ನಡೆಯುತ್ತಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಭಾಗವಹಿಸಲು ನಿರಾಕರಿಸಿರುವ ವಿಜ್ಞಾನಿ ವೆಂಕಟ್ರಾಮನ್ ರಾಮಕೃಷ್ಣ ಅವರು "ಹೋಮಿಯೊಪತಿ ಮತ್ತು ಜೋತಿಷ್ಯಶಾಸ್ತ್ರ ನಿಷ್ಪ್ರಯೋಜಕ ಮತ್ತು ಇದರ ಬಳಕೆ ಹಾನಿಕಾರಕ. ಇಂತಹ "ಬೋಗಸ್ " ಕ್ಷೇತ್ರಕ್ಕಿಂತ ನೈಜ ವಿಜ್ಞಾನ ಹೆಚ್ಚು ಆಸಕ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.
ಭಾರತದ ಸಂವಿಧಾನವು ವೈಜ್ಞಾನಿಕ ಅಭಿವೃದ್ಧಿಗೆ ಹೆಚ್ಚು ಉತ್ತೇಜನ ನೀಡುತ್ತಿದೆ. ಈ ಕಾರಣದಿಂದಾಗಿ ಭಾರತ ಇಂತಹ ಆಚರಣೆಗಳ ಬಗ್ಗೆ ಹೆಚ್ಚು ತರ್ಕಬದ್ಧವಾಗಿರಬೇಕು ಎಂದು ಅವರು ಹೇಳಿದ್ದಾರೆ.