ಉಗ್ರರ ದಾಳಿಯ ತನಿಖೆಗೆ ಪಠಾಣ್‌ಕೋಟ್‌ಗೆ ತಲುಪಿದ ಎನ್‌ಐಎ ಮುಖ್ಯಸ್ಥರು
ಪಂಜಾಬ್, ಜ.6: .ಪಠಾಣ್ ಕೋಟ್ ಮೇಲೆ ಉಗ್ರರ ದಾಳಿಯ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ )ಮುಖ್ಯಸ್ಥರಾದ ಶರದ್ ಕುಮಾರ್ ಇಂದು ಪಠಾಣ್ ಕೋಟ್ ತಲುಪಿದ್ದಾರೆ
ಪಠಾಣ್‌ಕೋಟ್‌ನಲ್ಲಿ ತನಿಖೆಗಾಗಿ ಎರಡು ಅಥವಾ ಮೂರು ದಿನಗಳ ಕಾಲ ನಿಲ್ಲುವ ಸಾಧ್ಯತೆ ಇದ್ದು, ವಾಯುನೆಲೆಯ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪ್ರತ್ಯಕ್ಷದರ್ಶಿಗಳನ್ನು ಭೇಟಿಯಾಗಿ ಮಾಹಿತಿ ಕಲೆಹಾಕಲಿದ್ದಾರೆ.
ವಾಯುನೆಲೆ ಮೇಲೆ ಉಗ್ರರ ದಾಳಿ, ಇನೋವಾ ಚಾಲಕನ ಹತ್ಯೆ ಮತ್ತು ಎಸ್‌ಪಿ ಸಲ್ವೇಂದರ್ ಕುಮಾರ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಈಗಾಗಲೇ ಮೂರು ಎಫ್‌ಐಆರ‍್ನ್ನು ದಾಖಲಿಸಿಕೊಂಡಿದೆ.
ಎನ್‌ಐಎ ಮುಖ್ಯಸ್ಥ ಶರದ್ ಕುಮಾರ್ ತಂಡದಲ್ಲಿ ೨೦ ತನಿಖಾಧಿಕಾರಿಗಳಿದ್ದಾರೆ. ಶರದ್ ಕುಮಾರ್ ಮಾರ್ಗದರ್ಶನದಲ್ಲಿ ತನಿಖೆಯ ನೇತೃತ್ವ ವಹಿಸಿಕೊಂಡಿರುವ ಮಹಾ ನಿರೀಕ್ಷಕರಾದ ಸಂಜಯ್ ಕುಮಾರ್ ಈಗಾಗಲೇ ಪಠಾಣ್ಕೋಟ್‌ನಲ್ಲಿದ್ದಾರೆ. ಇದೇ ವೇಳೆ ಡ್ರಗ್ಸ್ ಜಾಲದ ಸಂಪರ್ಕದ ಬಗ್ಗೆಯೂ ತನಿಖೆ ನಡೆಸಲಿದ್ದಾರೆ.ಮೂಲಗಳ ಪ್ರಕಾರ ಎಸ್ಪಿ ಸಲ್ವಿಂದರ್ ಸಿಂಗ್‌ರನ್ನು ಎನ್‌ಐಎ ತನಿಖೆಗೊಳಪಡಿಸಿದೆ.