×
Ad

ಗುರುದಾಸ್‌ಪುರ ಎಸ್ಪಿಗೆ ಸುಳ್ಳು ಪತ್ತೆ ಪರೀಕ್ಷೆ

Update: 2016-01-08 08:50 IST

ಪಠಾಣ್‌ಕೋಟ್: ಗುರುದಾಸ್‌ಪುರ ಪೊಲೀಸ್ ಅಧೀಕ್ಷಕ ಸಲ್ವಿಂದರ್ ಸಿಂಗ್ ಅವರನ್ನು ಸುಳ್ಳುಪತ್ತೆ ಪರೀಕ್ಷೆಗೆ ಗುರಿಪಡಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ ನಿರ್ಧರಿಸಿದೆ. ಪಠಾಣ್‌ಕೋಟ್ ದಾಳಿಯ ಮುನ್ನ ಉಗ್ರರು, ಎಸ್ಪಿ, ಅವರ ಸ್ನೇಹಿತ ಹಾಗೂ ಅಡುಗೆ ಸಹಾಯಕ ಸೇರಿದಂತೆ ಅವರ ಕಾರನ್ನು ಅಪಹರಿಸಿದ್ದರು ಎಂಬ ಬಗ್ಗೆ ಪರಸ್ಪರ ವೈರುದ್ಧ್ಯದ ಹೇಳಿಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News