ಅಲ್ ಖೈದಾ ನಂಟು ;ಧಾರ್ಮಿಕ ಶಿಕ್ಷಕನ ಸೆರೆ
Update: 2016-01-08 10:00 IST
ಹೊಸದಿಲ್ಲಿ, ಜ.8: ಉಗ್ರರ ಸಂಘಟನೆ ಅಲ್‌ಖೈದಾದ ನಂಟು ಹೊಂದಿರುವ ಆರೋಪದಲ್ಲಿ ದಿಲ್ಲಿ ಪೊಲೀಸರು ಬೆಂಗಳೂರಿನ ಧಾರ್ಮಿಕ ಶಿಕ್ಷಕರೊಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನ ಮೌಲಾನ ಅನ್ಸಾರ್ ಶಾ ಎಂಬವರು ಉಗ್ರ ಸಂಘಟನೆ ಅಲ್‌ಖೈದಾ ಜೊತೆ ಸಂಪರ್ಕ ಹೊಂದಿರುವ ಆರೋಪದಲ್ಲಿ ದಿಲ್ಲಿ ಪೊಲೀಸರು ಬೆಂಗಳೂರಿನ ಪೊಲೀಸರ ನೆರವಿನಲ್ಲಿ ಬಂಧಿಸಿ ದಿಲ್ಲಿಗೆ ಕರೆದೊಯ್ದಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜ.20ರ ತನಕ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಅನ್ಸಾರ್ ಯುವಕರನ್ನು ಉಗ್ರವಾದಕ್ಕೆ ಪ್ರಚೋದಿಸುತ್ತಿದ್ದರು ಎನ್ನಲಾಗಿದೆ. ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ರವಿವಾರ ಸಂಭವಿಸಿದ ಗಲಭೆಯಲ್ಲಿ ಅನ್ಸಾರ್ ಕೈವಾಡವಿದ್ದು, ಬಾಂಗ್ಲಾದೇಶ ಮೂಲದ ಉಗ್ರರಿಗೆ ಸಹಾಯ ಮಾಡುತ್ತಿದರೆಂದು ಆರೋಪಿಸಲಾಗಿದೆ.